ಚಿತ್ರದುರ್ಗ: ಆಡಳಿತ ನಡೆಸುವವರೇ ಹಗರಣದಲ್ಲಿ ಭಾಗಿಯಾದ್ರೆ ಹೇಗೆ..? ಬೇಲಿಯೇ ಎದ್ದು ಹೊಲ ಮೇದಂತೆ ಆಗಬಾರದು ಎಂದು ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ. ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಆಡಳಿತ ನಡೆಸುವವರೇ ಹಗರಣದಲ್ಲಿ ಭಾಗಿಯಾದ್ರೆ ಹೇಗೆ..? ಬೇಲಿಯೇ ಎದ್ದು ಹೊಲ ಮೇದಂತೆ ಆಗಬಾರದು ಹಗರಣದಲ್ಲಿರುವವರು ತಮ್ಮನ್ನು ತಾವು ತನಿಖೆಗೆ ಒಳಪಡಿಸಿಕೊಳ್ಳಬೇಕು,
ಮಕ್ಕಳಿಲ್ಲದ ಮಹಿಳೆಯರನ್ನು ಗರ್ಭಿಣಿ ಮಾಡಿ ಹಣ ಸಂಪಾದಿಸಿ: ಜಾಹೀರಾತು ವೈರಲ್
ಬಡವರಿಗೆ ಮನೆ ಕಟ್ಟಿಕೊಳ್ಳಲು ನಮ್ಮ ಹಿಂದಿನ ಸರಕಾರ ನಗರಾಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿತ್ತು, ಬಡವರಿಗೆ ಸೂರು ಒದಗಿಸುವ ನಿಟ್ಟಿನಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಆದರೆ ಆ ಉದ್ದೇಶ ಮರೆತು ಅಧಿಕಾರಿಗಳು, ಇನ್ನುಳಿದವರು ಸೇರಿ ಹಗರಣ ಮಾಡ್ತಿದ್ದಾರೆ ಆದರೆ ಇದು ತಪ್ಪು ಯಾವುದೇ ಸರಕಾರ ಹಗರಣ ನಡೆಸಿದ್ರೂ ತನಿಖೆ ನಡೆಸಬೇಕು ಜೊತೆಗೆ ನಿವೃತ್ತ ನ್ಯಾಯಾಧೀಶರ ಕಮೀಶನ್ ನೇಮಕ ಮಾಡಬೇಕು ರಾಜ್ಯದ ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರದ ಹಗರಣ ತನಿಖೆ ಆಗಬೇಕು ಎಂದು ಹೇಳಿದರು.