ಮಳೆಗಾಲ ಶುರುವಾಗಿದೆ ಶೀತ, ಕೆಮ್ಮು, ಜ್ವರ ಹೆಚ್ಚಾಗಿ ಕಂಡು ಬರುತ್ತಿದೆ. ವೈರಲ್ ಫೀವರ್ ಬಂದರೆ 3 ದಿನದಲ್ಲಿ ಕಡಿಮೆಯಾಗುತ್ತದೆ, ಇಲ್ಲ ಎಂದರೆ ಡೆಂಗೆ ಪರೀಕ್ಷೆ ಮಾಡಿಸಿಕೊಳ್ಳಿ. ಆದ್ದರಿಂದ ಸರಿಯಾದ ವೈದ್ಯಕೀಯ ಆರೈಕೆ ಅಗತ್ಯವಿರುತ್ತದೆ. ಎಂದಿಗೂ ನಿರ್ಲಕ್ಷ್ಯಬೇಡ
ಒಬ್ಬ ವ್ಯಕ್ತಿಯು ಡೆಂಗ್ಯೂ ವೈರಸ್ನಿಂದ ಪ್ರಭಾವಿತವಾದಾಗ, ಪ್ಲೇಟ್ಲೆಟ್ ಎಣಿಕೆಯಲ್ಲಿ ಹಠಾತ್ ಇಳಿಕೆ ಕಂಡುಬರುತ್ತದೆ, ಇದು ರಕ್ತ ಹೆಪ್ಪುಗಟ್ಟುವ ದೇಹದ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಸೋಂಕುಗಳನ್ನು ಎದುರಿಸುವಲ್ಲಿ ಅದನ್ನು ನಿಷ್ಕ್ರಿಯಗೊಳಿಸುತ್ತದೆ.
![Demo](https://ainlivenews.com/wp-content/uploads/2023/12/spoorthi-1.jpg)
ನಿಮ್ಮ ಬಿಳಿ ಕೂದಲು ಕಪ್ಪಾಗಲು ಈರುಳ್ಳಿ ಎಣ್ಣೆಗೆ ಈ ಪುಡಿ ಬೆರೆಸಿ ಹಚ್ಚಿ… ವಾರದಲ್ಲೇ ಬರುತ್ತೆ ರಿಸಲ್ಟ್!
ಡೆಂಗೆ ಹೇಗೆ ಬರುತ್ತದೆ ?
ತಿಳಿ ನೀರಿನಲ್ಲಿ ಉತ್ಪತ್ತಿಯಾಗುವ ಈಡಿಸ್ ಈಜಿಪ್ಟೈ ಎಂಬ ಸೊಳ್ಳೆಯೇ ಡೆಂಗೆ ಜನನಿ. ಇದು ಹಗಲು ಹೊತ್ತಿನಲ್ಲಿ ಕಚ್ಚುವ ಸೊಳ್ಳೆ. ಸಂಗ್ರಹಿಸಿಟ್ಟ ತಿಳಿ ನೀರಿನಲ್ಲಿ ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಮಾಡುತ್ತದೆ. ಇದರಿಂದ ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಅಪಾಯ ಹೆಚ್ಚು.
ಹೀಗಾಗಿ ಮಕ್ಕಳು, ಗರ್ಭಿಣಿಯರು, ವೃದ್ಧರು ಹಾಗೂ ರೋಗಿಗಳು ಹೆಚ್ಚು ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. ಮೂರು ಹಂತಗಳಲ್ಲಿ ಕಾಡುವ ಈ ಡೆಂಗೆಯಲ್ಲಿ ಸಾಮಾನ್ಯ ಜ್ವರ, ಡೆಂಗೆ ಹೆಮೊರೈಜಿನ್ (ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತದೆ) ಮತ್ತು ಡೆಂಗೆ ಶಾಕ್ ಸಿಂಡ್ರೋಮ್ (ದೇಹದಲ್ಲಿ ರಕ್ತಸ್ರಾವವಾಗಿ ರೋಗಿ ಗಂಭೀರ ಹಂತಕ್ಕೆ ತಲುಪುವ ಸಾಧ್ಯತೆಗಳಿರುತ್ತವೆ) ಇದರಿಂದಾಗಿ ಕೆಲವೊಮ್ಮೆ ರೋಗಿಗೆ ರಕ್ತ (ಪ್ಲೇಟ್ಲೆಟ್ಸ್) ನೀಡಿಕೆ ಅನಿವಾರ್ಯ
ಡೆಂಗೆ ಜ್ವರದ ಲಕ್ಷಣಗಳು:
* ಜ್ವರ, ತಲೆನೋವು
* ಶೀತ, ಗಂಟಲು ನೋವು
* ವಾಂತಿ, ಹೊಟ್ಟೆನೋವು, ಮೈ ಕೈ ನೋವು
* ಅತಿಸಾರ
* ಹೃದಯ ಬಡಿತ ಹೆಚ್ಚಾಗುವುದು
* ಮೈಮೇಲೆ ಅಲರ್ಜಿ ರೀತಿಯಲ್ಲಿ ಗುಳ್ಳೆಗಳು ಏಳುವುದು
ಡೆಂಗೆ ಜ್ವರ ತಡೆಗಟ್ಟುವುದು ಹೇಗೆ?
ಡೆಂಗೆ ಬಂದಾಗ ಪಪ್ಪಾಯಿ ಹಾಗೂ ಕಿವಿ ಹಣ್ಣನ್ನು ತಿನ್ನಬೇಕು. ಪಪ್ಪಾಯಿ ಎಲೆಯ ರಸ ಪ್ಲೇಟ್ಲೆಟ್ ಹೆಚ್ಚಿಸುವಲ್ಲಿ ಸಹಕಾರಿ.
ಎಳೆನೀರು ಹೆಚ್ಚು ಕುಡಿಯಿರಿ
ಪಪ್ಪಾಯಿ ಎಲೆಯ ರಸ ಕುಡಿದರೆ, ಡೆಂಗ್ಯೂ ಜ್ವರ ಕಂಟ್ರೋಲ್ ಮಾಡಬಹುದು
ಡೆಂಗೆ ತಡೆಗಟ್ಟಲು ಏನು ಮಾಡಬೇಕು?
* ಡೆಂಗೆ ತಡೆಗಟ್ಟಲು ಸೊಳ್ಳೆಗಳನ್ನು ನಿಯಂತ್ರಿಸಬೇಕು
* ಹಗಲಿನಲ್ಲಿ ಸೊಳ್ಳೆ ಕಚ್ಚದಂತೆ ಎಚ್ಚರವಹಿಸಿ
* ಶುದ್ಧ ಹಾಗೂ ಕುದಿಸಿ ಆರಿಸಿದ ನೀರನ್ನು ಕುಡಿಯುವುದು ಉತ್ತಮ
* ನೀರು ಶೇಖರಣಾ ತೊಟ್ಟಿ, ಟ್ಯಾಂಕ್ಗಳ ಮುಚ್ಚಳವನ್ನು ಭದ್ರವಾಗಿ ಮುಚ್ಚಿಡಿ
* ಪಾತ್ರೆ ಹಾಗೂ ಬಿಂದಿಗೆಗಳಲ್ಲಿ ಹೆಚ್ಚು ದಿನ ನೀರು ಸಂಗ್ರಹಿಸಿಡಬೇಡಿ
* ಮನೆಯ ಸುತ್ತಲು ಹಾಗೂ ತಾರಸಿಯ ಮೇಲೆ ನೀರು ನಿಲ್ಲದಂತೆ ಎಚ್ಚರವಹಿಸಿ
* ತೆಂಗಿನ ಚಿಪ್ಪು, ಟಯರ್ ನಂತಹ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಿ.
* ತೊಟ್ಟಿ, ಬಿಂದಿಗೆ, ಡ್ರಮ್ಗಳಲ್ಲಿ 2-3 ದಿನಕ್ಕೊಮ್ಮೆ ನೀರು ಬದಲಿಸಿ ಸ್ವಚ್ಛಗೊಳಿಸಿ.
* ಸೀನುವಾಗ, ಕೆಮ್ಮುವಾಗ ಕರವಸ್ತ್ರಗಳನ್ನು ಅಡ್ಡಲಾಗಿ ಇಟ್ಟುಕೊಳ್ಳಿ.
* ಸೊಳ್ಳೆಗಳನ್ನು ತಡೆಯಲು ಕಿಟಕಿ ಬಾಗಿಲುಗಳಿಗೆ ಮೆಶ್ ಹಾಕಿ ಅಥವಾ ಸೊಳ್ಳೆ ನಾಶಕ ಔಷಧಗಳನ್ನು ಬಳಸಿ.
* ಹಳ್ಳಿಗಳಲ್ಲಾದರೆ ಸೊಳ್ಳೆಗಳನ್ನು ನಿಯಂತ್ರಿಸಲು ಬೇವಿನ ಸೊಪ್ಪಿನ ಹೊಗೆ ಹಾಕುವುದು ಒಳಿತು.
![](https://ainlivenews.com/wp-content/uploads/2024/01/Ad-Banner-copy-scaled.jpg)