ಗರ್ಭಾವಸ್ಥೆಯ ಪ್ರತಿಯೊಂದು ದಿನವು ವಿಶೇಷವಾಗಿರುತ್ತದೆ. ಈ ಸಮಯದಲ್ಲಿ ಏನು ತಿನ್ನಬೇಕು? ಏನು ತಿನ್ನಬಾರದು? ಎಂಬುದರ ಬಗ್ಗೆ ಸರಿಯಾಗಿ ತಿಳಿಯುವುದು ಬಹಳ ಮುಖ್ಯ.
ಗರ್ಭಾವಸ್ಥೆಯಲ್ಲಿ ತಪ್ಪಿಸಬೇಕಾದ ಆಹಾರಗಳು ಸಾಮಾನ್ಯವಾಗಿ ಸೋಂಕಿನ ಅಪಾಯವನ್ನು ಹೊಂದಿರಬಹುದು ಎನ್ನಲಾಗುತ್ತದೆ. ಇದು ಭ್ರೂಣಕ್ಕೆ ತೊಂದರೆಯನ್ನು ಸೃಷ್ಟಿಸುತ್ತದೆ. ನಿಮ್ಮನ್ನು ಮತ್ತು ನಿಮ್ಮ ಹುಟ್ಟಲಿರುವ ಮಗುವನ್ನು ಪೋಷಿಸಲು ಗರ್ಭಾವಸ್ಥೆಯಲ್ಲಿ ಚೆನ್ನಾಗಿ ತಿನ್ನುವುದು ಅತ್ಯಗತ್ಯ.
ಫೋನ್ ನಲ್ಲಿರುವ ಕಾಂಟ್ಯಾಕ್ಟ್ ದಿಢೀರ್ ಡಿಲೀಟ್ ಆದ್ರೆ ಟೆನ್ಷನ್ ಬಿಡಿ: ಹೀಗೆ ಮಾಡಿ!
ಇದಕ್ಕೂ ಮೊದಲು ಗರ್ಭಧಾರಣೆಯ ಮೊದಲ ಮೂರು ತಿಂಗಳುಗಳು ಅಂದರೆ ಮೊದಲ ತ್ರೈಮಾಸಿಕವು ತಾಯಿ ಮತ್ತು ಮಗುವಿಗೆ ಬಹಳ ಸೂಕ್ಷ್ಮ ಸಮಯವಾಗಿದೆ. ಏಕೆಂದರೆ ಈ ಸಮಯದಲ್ಲಿ ಗರ್ಭಪಾತದ ಸಾಧ್ಯತೆಗಳು ಹೆಚ್ಚು. ಅಷ್ಟೇ ಅಲ್ಲದೇ ಮಗುವಿನ ಬೆಳವಣಿಗೆಯಲ್ಲಿ ಕೆಲವು ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಈ ಮೂರು ತಿಂಗಳು ತುಂಬಾ ಎಚ್ಚರಿಕೆಯಿಂದ ಇರಲು ವೈದ್ಯರು ಹೇಳುತ್ತಾರೆ.
ಎಲ್ಲರಿಗೂ ಮೊದಲೇ ಹೇಳಿದರೆ. ಅನಿರೀಕ್ಷಿತವಾಗಿ ಏನಾದರೂ ಸಮಸ್ಯೆ ಉಂಟಾದರೆ, ಪ್ರತಿಯೊಬ್ಬರ ಪ್ರಶ್ನೆಗಳಿಗೆ ಉತ್ತರಿಸಲು ತುಂಬಾ ಕಷ್ಟವಾಗುತ್ತದೆ. ಇದು ಭಾವನಾತ್ಮಕವಾಗಿಯೂ ತುಂಬಾ ನೋವುಂಟು ಮಾಡುತ್ತದೆ. ಹಾಗಾಗಿ ಅನೇಕ ಮಹಿಳೆಯರು ಮೂರು ತಿಂಗಳ ನಂತರ ಅಪಾಯ ಕಡಿಮೆಯಾದಾಗ ಮಾತ್ರ ಈ ಒಳ್ಳೆಯ ಸುದ್ದಿಯನ್ನು ಹಂಚಿಕೊಳ್ಳುತ್ತಾರೆ.
ಮಗುವಿನಲ್ಲಿ ಆಗುವ ಬದಲಾವಣೆಗಳು: ಮೊದಲ ತ್ರೈಮಾಸಿಕವು ಮಗುವಿನ ಬೆಳವಣಿಗೆಯಲ್ಲಿ ಪವಾಡಗಳನ್ನೇ ಸೃಷ್ಟಿಸುತ್ತದೆ. ಈ ಸಮಯದಲ್ಲಿ ಮಗುವಿನ ದೇಹದ ಪ್ರಮುಖ ಭಾಗಗಳು ಬೆಳವಣಿಗೆಯಾಗಲು ಪ್ರಾರಂಭಿಸುತ್ತವೆ. ಮೂರು ತಿಂಗಳಲ್ಲಿ ಮಗುವಿನ ಗಾತ್ರ ಕೇವಲ 6.5 ರಿಂದ 8 ಸೆಂ.ಮೀ. ತೂಕವೂ 13 ರಿಂದ 20 ಗ್ರಾಂ ಆಗುತ್ತದೆ. ಅಲ್ಲದೇ ಈ ಸಮಯದಲ್ಲಿ ಮಗುವಿನ ದೇಹದಲ್ಲಿ ಅನೇಕ ಬದಲಾವಣೆಗಳು ನಡೆಯುತ್ತವೆ.
ಕರುಳುಗಳು, ಸ್ನಾಯುಗಳು ಸಿದ್ಧವಾಗುತ್ತವೆ, ಮೂಳೆಗಳು ಬಲಗೊಳ್ಳಲು ಪ್ರಾರಂಭಿಸುತ್ತವೆ. ಇದಲ್ಲದೇ, ಬೆರಳುಗಳು, ಕಾಲ್ಬೆರಳುಗಳು ಮತ್ತು ಮುಖದ ಲಕ್ಷಣಗಳು ಸಹ ಸ್ಪಷ್ಟವಾಗಿ ಗೋಚರಿಸುತ್ತವೆ. ಸಣ್ಣ ಕಿವಿಗಳು ಸಹ ಕಾಣಿಸಿಕೊಳ್ಳುತ್ತವೆ. ಚಿಕ್ಕ ಬೀಜವು ಹೇಗೆ ಗಿಡವಾಗಿ ಬೆಳೆಯುತ್ತದೆಯೋ ಅದೇ ರೀತಿ ಮಗು ಕೂಡ ಬೆಳೆಯುತ್ತದೆ.
ತಾಯಿಯಲ್ಲಿ ಬದಲಾವಣೆ: ಮೊದಲ ಮೂರು ತಿಂಗಳಲ್ಲಿ ಮಗುವಿನ ಬೆಳವಣಿಗೆಯೊಂದಿಗೆ ತಾಯಿಯ ದೇಹವೂ ಹಲವು ಬದಲಾವಣೆಗಳಿಗೆ ಒಳಗಾಗುತ್ತದೆ. ಹಾರ್ಮೋನುಗಳ ಬದಲಾವಣೆಗಳು ವಿವಿಧ ಭಾವನೆಗಳನ್ನು ಉಂಟುಮಾಡಬಹುದು. ಸ್ತನಗಳು ಕೋಮಲವಾಗಿರಬಹುದು, ಹೆಚ್ಚಾಗಿ ಮೂತ್ರ ವಿಸರ್ಜನೆ ಮಾಡಬೇಕಾಗುತ್ತದೆ, ಮಲಬದ್ಧತೆ ಮತ್ತು ಗ್ಯಾಸ್ ಸಮಸ್ಯೆಗಳು ಉಂಟಾಗಬಹುದು.
ರುಚಿ ಮತ್ತು ಮನಸ್ಥಿತಿ ಬದಲಾವಣೆಗಳು ಸಹ ಈ ಸಮಯದಲ್ಲಿ ಮಹಿಳೆಯರಲ್ಲಿ ಸಾಮಾನ್ಯ. ಕೆಲವರಿಗೆ ಬೆಳಗಿನ ಬೇನೆಯೂ ಇರುತ್ತದೆ. ಪ್ರತಿಯೊಬ್ಬರ ದೇಹವು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತದೆ. ಈ ರೋಗಲಕ್ಷಣಗಳು ಪ್ರತಿ ಮಹಿಳೆಯರಲ್ಲಿಯೂ ಬದಲಾಗಬಹುದು. ಆದರೆ ಇವೆಲ್ಲವೂ ತಾತ್ಕಾಲಿಕ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ
ಮೊದಲ ತ್ರೈಮಾಸಿಕದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು: ತಾಯಂದಿರು ಭಾರ ಎತ್ತುವುದು ಮತ್ತು ಶ್ರಮದಾಯಕ ಚಟುವಟಿಕೆಗಳನ್ನು ಸಂಪೂರ್ಣವಾಗಿ ತಪ್ಪಿಸಬೇಕು. ಆರೋಗ್ಯಕರ ಮತ್ತು ಸಮತೋಲಿತ ಆಹಾರವನ್ನು ತೆಗೆದುಕೊಳ್ಳಬೇಕು. ಹಣ್ಣುಗಳು, ತರಕಾರಿಗಳು ಮತ್ತು ಪ್ರೋಟೀನ್ ಆಹಾರಗಳನ್ನು ಸೇವಿಸಿ. ಮದ್ಯಪಾನ, ಧೂಮಪಾನದಿಂದ ದೂರವಿರಬೇಕು ಮತ್ತು ಮಾಲಿನ್ಯವನ್ನು ತಪ್ಪಿಸಬೇಕು.
ಯಾವುದೇ ಔಷಧಿಯನ್ನು ತೆಗೆದುಕೊಳ್ಳುವ ಮುನ್ನ ವೈದ್ಯರನ್ನು ಸಂಪರ್ಕಿಸಿ. ಈ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿರುತ್ತಾರೆ