ಪ್ರತಿನಿತ್ಯವೂ ನಾವು ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳ ವಿಚ್ಛೇದನದ ಸುದ್ದಿಯನ್ನೇ ಕೇಳುತ್ತಿರುತ್ತೇವೆ. ಸಂಬಂಧಗಳು ಗಟ್ಟಿಯಾಗು ವಂತಹ ಸಮಯದಲ್ಲಿ ಅದು ಇನ್ನಷ್ಟು ದುರ್ಬಲ ವಾಗುತ್ತಿರುವುದು ಗೋಚರವಾಗುತ್ತಿದೆ.
ಮೈಕ್ರೋ ಫೈನಾನ್ಸ್ ಬಂದ್ ಆಗಬೇಕು; ಸರ್ಕಾರದಿಂದ ಸೂಕ್ತ ನಿರ್ಧಾರ ಕೈಗೊಳ್ಳಲಿದೆ; ಸಚಿವ ಲಾಡ್
ಇಂತಹ ಸಮಯದಲ್ಲಿ ಯಾವುದೇ ಸಂಬಂಧವಾಗಿರಲಿ ಅಥವಾ ವೈವಾಹಿಕ ಜೀವನವಾಗಿರಲಿ, ಅಲ್ಲಿ ಕೆಲವು ನಿಯಮಗಳನ್ನು ಪಾಲಿಸಿಕೊಂಡು ಹೋಗುವುದು ಅನಿವಾರ್ಯವಾಗಿದೆ. ಯಾಕೆಂದರೆ ಯಶಸ್ವಿ ಜೀವನಕ್ಕೆ ಕೆಲವು ಸೂತ್ರಗಳನ್ನು ಪಾಲಿಸಬೇಕಾಗುತ್ತದೆ. ಈ ಸೂತ್ರಗಳು ವೈವಾಹಿಕ ಜೀವನ ಯಶಸ್ವಿಗೊಳಿಸಲು ಸಹಕಾರಿ ಆಗಿದೆ.
ಇನ್ನೂ ಜನರು ವಾಸ್ತು ಶಾಸ್ತ್ರವನ್ನು ನಂಬುವವರು ಕೂಡ ಇದ್ದಾರೆ. ವಿಶೇಷವಾಗಿ ಮನೆ ಕಟ್ಟುವಾಗ ಸ್ಥಳದ ಆಯ್ಕೆಯಿಂದ ಹಿಡಿದು ಕಟ್ಟಡ ನಿರ್ಮಾಣದವರೆಗೆ ಪ್ರತಿಯೊಂದಕ್ಕೂ ವಾಸ್ತು ನೋಡಿಕೊಂಡೇ ಮುಂದುವರೆಯುವುದನ್ನು ಕಾಣಬಹುದು.
ಇನ್ನೂ ಗಂಡ-ಹೆಂಡತಿ ವಿಚಾರಕ್ಕೆ ಬಂದ್ರೆ, ಮನೆಯ ಕೋಣೆಯಲ್ಲಿ ಗಂಡ-ಹೆಂಡತಿ ಒಟ್ಟಿಗೆ ಮಲಗುತ್ತಾರೆ. ಆದರೆ, ಅವರು ಹೇಗೆ ಮಲಗುತ್ತಾರೆ ಎನ್ನುವುದು ಮತ್ತು ಅವರು ಮಲಗುವ ಸ್ಥಾನವೂ ಕೂಡ ಮುಖ್ಯವಾಗಿರುತ್ತದೆ. ವಾಸ್ತು ಶಾಸ್ತ್ರದಲ್ಲಿ ಗಂಡ-ಹೆಂಡತಿ ಮಲಗುವುದಕ್ಕೂ ಕೆಲವು ನಿಯಮಗಳಿವೆ. ವಾಸ್ತು ಶಾಸ್ತ್ರದ ಪ್ರಕಾರ ಪತಿ-ಪತ್ನಿ ಮಲಗುವಾಗ ತಪ್ಪು ಮಾಡಿದರೆ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಶಾಸ್ತ್ರ ಸೂಚಿಸುತ್ತದೆ.
ಭಗವಾನ್ ಶಿವನು ಅರ್ಧನಾರೇಶ್ವರನ ರೂಪವನ್ನು ಧರಿಸಿದಾಗ ಸ್ತ್ರೀ ಅಂಶ ಅಂದರೆ ತಾಯಿ ಪಾರ್ವತಿಯು ಅವನ ಎಡಭಾಗದ ದೇಹದಲ್ಲಿ ಗೋಚರಿಸುತ್ತಾಳೆ. ಸತ್ಯವಾನನ ಪ್ರಾಣ ತೆಗೆಯಲು ಯಮರಾಜನು ಎಡಭಾಗದಿಂದ ಬಂದನು ಮತ್ತು ಸಾವಿತ್ರಿಯು ತನ್ನ ಗಂಡನ ಜೀವವನ್ನು ಉಳಿಸಿದಳು ಎಂಬ ಪ್ರತೀತಿ ಕೂಡ ಇದೆ. ಈಗಲೂ ಕೂಡ ಅನೇಕ ಸಂದರ್ಭಗಳಲ್ಲಿ ಹಾಗೂ ಶುಭ ಕಾರ್ಯದಲ್ಲಿ ಪತ್ನಿಯು ಪತಿಯ ಎಡಭಾಗದಲ್ಲಿ ಕುಳಿತುಕೊಳ್ಳುತ್ತಾಳೆ. ಹಾಗಾದರೆ, ಹೆಂಡತಿಯು ಗಂಡನ ಯಾವ ಕಡೆ ಮಲಗಬೇಕು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ವಾಸ್ತು ಶಾಸ್ತ್ರವು ಪತಿ ಮತ್ತು ಹೆಂಡತಿಯ ಸರಿಯಾದ ದಿಕ್ಕು ಮತ್ತು ಮಲಗುವ ವಿಧಾನವನ್ನು ಸೂಚಿಸುತ್ತದೆ.
ಗಂಡ ಮತ್ತು ಹೆಂಡತಿಯ ಮಲಗುವ ಭಂಗಿಗೆ ಸಂಬಂಧಿಸಿದಂತೆ, ಹೆಂಡತಿ ಯಾವ ಬದಿಯಲ್ಲಿ ಮಲಗಬೇಕು? ಹೆಂಡತಿ ಯಾವ ಕಡೆ ಮಲಗಬೇಕೆಂದು ವಾಸ್ತು ಶಾಸ್ತ್ರವೂ ಹೇಳುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಹೆಂಡತಿ ಗಂಡನ ಎಡಭಾಗದಲ್ಲಿ ಮಲಗಬೇಕು.
ಪತ್ನಿಯು ಪತಿಯ ಎಡಭಾಗದಲ್ಲಿ ಮಲಗುವುದು ಶುಭ ಸಂಖೇತವಾಗಿದೆ. ಹೆಂಡತಿ ಗಂಡನ ಎಡಭಾಗದಲ್ಲಿ ಮಲಗಿದರೆ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಸಂತೋಷ ಹೆಚ್ಚುತ್ತದೆ. ಗಂಡನ ಎಡಭಾಗದಲ್ಲಿ ಮಲಗಿದರೆ ಗಂಡನಿಗೆ ತುಂಬಾ ಲಾಭ. ಅವನು ದೀರ್ಘಕಾಲ ಬದುಕುತ್ತಾನೆ, ಆರೋಗ್ಯಕರ. ಅವನ ಅದೃಷ್ಟವು ಅವನನ್ನು ಬೆಂಬಲಿಸುತ್ತದೆ ಎನ್ನಲಾಗಿದೆ