ಬೆಂಗಳೂರು:- ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿ ಸಾವನ್ನಪ್ಪಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಉತ್ತನಹಳ್ಳಿ ಬಳಿ ಜರುಗಿದೆ.
ಪ್ರೀತಿಸಿ ಮದುವೆಯಾದ ಪತಿಯಿಂದಲೆ ಪತ್ನಿಯ ಕೊಲೆ ಮಾಡಿದ್ದಾರೆ ಎಂದು ಮಹಿಳೆಯ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ವಿಜಯನಗರ ಜಿಲ್ಲೆಯ ಕೂಡ್ಲಿಗೆ ಮೂಲದ ದುರ್ಗಮ್ಮ ಮೃತ ಮಹಿಳೆ ಎನ್ನಲಾಗಿದೆ.
ಗಂಡ ಮಾರುತಿ ಅನುಮಾನದಿಂದ ಪತ್ನಿಯನ್ನ ಕೊಲೆ ಮಾಡಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ. ಎರಡು ವರ್ಷಗಳಿಂದೆ ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಪೋಷಕರ ವಿರೋಧದ ನಡುವೆ ಮದುವೆಯಾಗಿ ನಂತರ ಎರಡು ಕುಟುಂಬಗಳು ಒಂದಾಗಿದ್ದರು.
ಮದುವೆ ನಂತರ ಕೂಡ್ಲಗಿಯಿಂದ ಬೆಂಗಳೂರಿಗೆ ದಂಪತಿ ಬಂದಿದ್ದರು. ಚಿಕ್ಕಜಾಲದ ಉತ್ತನಹಳ್ಳಿ ಬಳಿ ಗಾರೆ ಕೆಲಸ ಮಾಡಿಕೊಂಡು ಗಂಡ ಹೆಂಡತಿ ಜೀವನ ಮಾಡ್ತಿದ್ದರು. ಆದ್ರೆ ಪದೇ ಪದೇ ಪತ್ನಿ ಮೇಲೆ ಅನುಮಾನದಿಂದ ಹೊಡೆದು ಕಿರುಕುಳ ಆರೋಪ ಮಾಡಲಾಗಿದೆ.
ಕಳೆದ ಒಂದು ತಿಂಗಳ ಹಿಂದೆಯೂ ಗಲಾಟೆ ಮಾಡಿಕೊಂಡು ಮೃತ ಮಹಿಳೆ ದುರ್ಗಮ್ಮ ಊರಿಗೆ ಹೋಗಿದ್ದರು. ಆದ್ರೆ 15 ದಿನಗಳ ಹಿಂದೆ ಪತ್ನಿಯ ಮನವೊಲಿಸಿ ಗಂಡ ಮಾರುತಿ ಬೆಂಗಳೂರಿಗೆ ಕರೆತಂದಿದ್ದರು. ಆದ್ರೆ ಬಂದ 15 ದಿನದಲ್ಲೆ ಮಹಿಳೆ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪಿದ್ದು ಗಂಡನಿಂದಲೆ ಕೊಲೆ ಆರೋಪ ಮಾಡಲಾಗಿದೆ.
ಸಧ್ಯ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.