ರಾಯಚೂರು: ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆಯಾಗಿದ್ದು, ಪತಿಯೇ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪ್ರಸನ್ನ ಲಕ್ಷ್ಮೀ (35) ಮೃತ ಮಹಿಳೆ. ರಾಯಚೂರು ನಗರದ ವಾಸವಿನಗರದಲ್ಲಿ ಘಟನೆ ನಡೆದಿದೆ.
ಜಂಬನಗೌಡ ಮತ್ತು ಪ್ರಸನ್ನಲಕ್ಷ್ಮೀ ಅವರ ಮದುವೆಯಾಗಿ 16 ವರ್ಷಗಳಾಗಿತ್ತು. ಆದರೆ ಈಗ ಡಿವೋರ್ಸ್ಗಾಗಿ ಪೀಡಿಸುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಕೌಟುಂಬಿಕ ಕಲಹದಿಂದದಿಂದಾಗಿ ಇಬ್ಬರು ಬೇರೆ ಬೇರೆಯಾಗಿದ್ದರು ಎನ್ನಲಾಗುತ್ತಿದೆ.
ಕಾರು ಮತ್ತು ಬಸ್ ಮಧ್ಯೆ ಡಿಕ್ಕಿ ; ಹೊತ್ತುರಿದ ಕಾರು ; ಇಬ್ಬರು ಸಜೀವ ದಹನ
ರಾತ್ರಿ ಮಕ್ಕಳು ಹೊರಗಡೆ ಹೋಗಿದ್ದಾಗ ಘಟನೆ ನಡೆದಿದೆ. ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪ್ರಸನ್ನ ಲಕ್ಷ್ಮೀ ಶವ ಪತ್ತೆಯಾಗಿದ್ದು, ಪತಿ ಜಂಬನಗೌಡ ಪರಾರಿಯಾಗಿದ್ದಾನೆ.ಸದ್ಯ ಈ ಸಂಬಂಧ ರಾಯಚೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.