ಬೆಂಗಳೂರು:-ಇಂದಿರಾ ಕ್ಯಾಂಟೀನ್ಗಳಿಗೆ ಡಿಜಿಟಲ್ ಟಚ್ ನೀಡಲು ಸರ್ಕಾರ ಮುಂದಾಗಿದೆ.
ಇಂದಿರಾ ಕ್ಯಾಂಟೀನ್ಗಳಿಗೆ ಡಿಜಿಟಲ್ ಟಚ್ ನೀಡುವ ಮೂಲಕ ಹೋಟೆಲ್-ರೆಸ್ಟೋರೆಂಟ್ ಗಳ ರೀತಿಯಲ್ಲಿಯೇ ಆರ್ಡರ್ ಗಳ ಪಡೆಯಲು ಚಿಂತನೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ.
Hubballi: ನಾಪತ್ತೆಯಾಗಿದ್ದ ಮಹಿಳೆ ಬೆಣ್ಣೆ ಹಳ್ಳದಲ್ಲಿ ಶವವಾಗಿ ಪತ್ತೆ!
ಬೆಂಗಳೂರಿನ 169 ಇಂದಿರಾ ಕ್ಯಾಂಟೀನ್ಗಳಲ್ಲಿ ಡಿಜಿಟಲ್ ವ್ಯವಸ್ಥೆ ಅಳವಡಿಕೆಗೆ ಸಜ್ಜಾಗಿರೋ ಪಾಲಿಕೆ, ಇದೀಗ ಆರ್.ಆರ್.ನಗರ ವ್ಯಾಪ್ತಿಯಲ್ಲಿ ಟ್ರಯಲ್ ನಡೆಸಿ ಸಾಧಕ-ಬಾಧಕಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ. ಬೆಂಗಳೂರಿನ ಇಂದಿರಾ ಕ್ಯಾಂಟೀನ್ ಗಳಲ್ಲಿ ಡಿಜಿಟಲ್ ವ್ಯವಸ್ಥೆ ಅಳವಡಿಕೆಗೆ ಶೀಘ್ರದಲ್ಲೇ ಟೆಂಡರ್ ಕರೆಯೋಕೆ ಸಜ್ಜಾಗಿದೆ. ಸದ್ಯ ಇರುವ ಇಂದಿರಾ ಕ್ಯಾಂಟೀನ್ಗಳಲ್ಲಿ ಆಹಾರದ ಗುಣಮಟ್ಟ, ಗುತ್ತಿಗೆದಾರರ ಸಮಸ್ಯೆಗಳು, ಶುಚಿತ್ವ, ಬೇಡಿಕೆ ಕುರಿತು ದೂರುಗಳು ಬಂದ ಬೆನ್ನಲ್ಲೆ ಡಿಜಿಟಲ್ ತಂತ್ರಜ್ಞಾನದ ಮೊರೆ ಹೋಗಲು ಪಾಲಿಕೆ ಪ್ಲಾನ್ ಮಾಡಿದೆ.
ಡಿಜಿಟಲ್ ಟಚ್ ಪ್ರಯೋಜನಗಳೇನು?
ಇಂದಿರಾ ಕ್ಯಾಂಟೀನ್ಗಳ ಕಾರ್ಯನಿರ್ವಹಣೆ ಮಾಹಿತಿ ಸಂಗ್ರಹ
ಗ್ರಾಹಕರು ಆರ್ಡರ್ ಮಾಡಿದ್ರೆ ಪ್ರಧಾನ ಕಚೇರಿಗೂ ಆರ್ಡರ್ ಮಾಹಿತಿ ರವಾನೆ
ಡಿಜಿಟಲ್ ಟೆಕ್ನಾಲಜಿ ಮೂಲಕ ಆರ್ಡರ್ ಗೆ ಅವಕಾಶ
ಆಹಾರದ ಬೇಡಿಕೆ, ಗುಣಮಟ್ಟ, ಗ್ರಾಹಕರ ಅನಿಸಿಕೆ ಸಂಗ್ರಹಕ್ಕೆ ಸಹಾಯ
ಕುಂದು-ಕೊರತೆಗಳ ಬಗ್ಗೆ ಮಾಹಿತಿ ಕಲೆಗೆ ಸಹಾಯ
ಒಟ್ಟಿನಲ್ಲಿ ರಾಜಧಾನಿಯ ಇಂದಿರಾ ಕ್ಯಾಂಟೀನ್ಗಳ ಬಗ್ಗೆ ಅಲ್ಲಲ್ಲಿ ಅಪಸ್ವರ ಕೇಳಿಬರ್ತಿದ್ದು, ಸದ್ಯ ಈ ಸಮಸ್ಯೆಗಳನ್ನ ಬಗೆಹರಿಸೋಕೆ ಪಾಲಿಕೆ ಡಿಜಿಟಲ್ ತಂತ್ರಜ್ಞಾನ ಅಳವಡಿಕೆಗೆ ಸಜ್ಜಾಗ್ತಿದೆ.