ತುಮಕೂರು: ತುಮಕೂರಿನ ನಾಗರೀಕರೇ ಎಚ್ಚರ ಎಚ್ಚರ. ನೀವು ಹೆಬ್ಬಾಕ ಕೆರೆ ನೀರು ಕುಡಿಯುವ ಮುನ್ನ ಕೊಂಚ ಯೋಚಿಸಿರಿ. ಯಾಕೆಂದರೆ ಹೆಬ್ಬಾಕ ಕೆರೆಗೆ ಸೇರುತ್ತಿದೆ ವಿಷಕಾರಿ ತ್ಯಾಜ್ಯ. ಹೌದು, ಹೆಬ್ಬಾಕ ಕೆರೆಗೆ ಟನ್ ಗಟ್ಟಲೇ ಆಸ್ಪತ್ರೆ ತ್ಯಾಜ್ಯ ಸುರಿಯಾಲಾಗುತ್ತಿದೆ. ಜಿಲ್ಲೆಯಲ್ಲಿ ಇತ್ತೀಚೆಗೆ ಧಾರಾಕಾರ ಮಳೆಯಾಗಿದ್ದು, ಅಕ್ಕಪಕ್ಕದ ಕೆರೆಗಳು ಕೋಡಿ ಬಿದ್ದಿವೆ. ಕೋಡಿ ನೀರಿನೊಂದಿಗೆ ಹೆಬ್ಬಾಕ ಕೆರೆಗೆ ಆಸ್ಪತ್ರೆ ತ್ಯಾಜ್ಯ ಕೂಡ ಸೇರುತ್ತಿದೆ.
ನಾನೇ ನನ್ನ ಸ್ವಂತ ಶಕ್ತಿಯಿಂದ ರಾಜಕೀಯಕ್ಕೆ ಬಂದಿದ್ದೇನೆ: ಬಸವರಾಜ ಹೊರಟ್ಟಿ
ರಾಷ್ಟ್ರೀಯ ಹೆದ್ದಾರಿ 48 ರ ಪಕ್ಕದ ಕೆರೆ ದಡದಲ್ಲಿ , ಆಸ್ಪತ್ರೆಯಲ್ಲಿ ಬಳಸಿದ ಸಿರೆಂಜ್ಗಳು, ಔಷಧಿ ಬಾಟೆಲ್ಗಳು, ವ್ಯಾಕ್ಸಿನ್ಗಳು ಸೇರಿದಂತೆ ರಾಶಿ ರಾಶಿ ತ್ಯಾಜ್ಯ ಪತ್ತೆಯಾಗಿದೆ. ತುಮಕೂರು ನಗರಕ್ಕೆ ಕುಡಿಯುವ ನೀರುವ ಪೂರೈಕೆ ಮಾಡುವ ಎರಡನೇ ಹಂತದ ಯೋಜನೆ ವ್ಯಾಪ್ತಿಗೆ ಹೆಬ್ಬಾಕ ಅಮಾನಿಕೆರೆ ಸಹ ಒಳಪಡುವುದು. ಇದೀಗ ಕೆರೆ ನೀರು ಸಂಪೂರ್ಣ ಕಲುಷಿತಗೊಂಡಿದ್ದು, ಸುತ್ತಮುತ್ತಲ ಗ್ರಾಮಸ್ಥರು ಆತಂಕಗೊಂಡಿದ್ದಾರೆ.