ಚಿಕ್ಕಬಳ್ಳಾಪುರ: ರಾಮನಗರ ಜಿಲ್ಲೆಯ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಮುನೇಗೌಡ ಸಂಬಂಧಿಸಿದ ಹಲವು ನಿವಾಸಗಳ ಮೇಲೆ ಲೋಕಾಯುಕ್ತ ಪೊಲೀಸರು ಏಕ ಕಾಲದಲ್ಲಿ ದಾಳಿ ಮಾಡಿದ್ದು, ಮುನೇಗೌಡರ ಎರಡನೇ ಪತ್ನಿಯ ನಿವಾಸ ಚಿಕ್ಕಬಳ್ಳಾಪುರದ ನಂದಿ ಕ್ರಾಸ್ ಬಳಿಯೂ ದಾಳಿ ನಡೆಸಲಾಗಿದೆ. ದಾಳಿ ವೇಳೆ ಮುನೇಗೌಡ ಸಹ ಇದೇ ಮನೆಯಲ್ಲಿದ್ದು ಹಲವು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ 250 ಗ್ರಾಂ ಚಿನ್ನಾಭರಣ, 3 ಕೆಜಿ ಬೆಳ್ಳಿ, ಹಾಗೂ 66 ಸಾವಿರ ನಗದು ಹಣ ವಶಪಡಿಸಿಕೊಳ್ಳಲಾಗಿದೆ ಅಂತ ಮಾಹಿತಿ ಸಿಕ್ಕಿದೆ.
ರಾಕಿಭಾಯ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ಡಿಸೆಂಬರ್ 8ಕ್ಕೆ ಮುಂದಿನ ಚಿತ್ರದ ಟೈಟಲ್ ಘೋಷಣೆ!
ಇನ್ನೂ ಮುನೇಗೌಡ ಸ್ವಗ್ರಾಮ ಕೆಜಿ ಪುರದಲ್ಲೂ ನಿವಾಸಗಳ ಮೇಲೂ ದಾಳಿ ನಡೆಸಲಾಗಿದ್ದು ದಾಖಲೆಗಳ ಪರಿಶೀಲನೆ ನಡೆಸಲಾಗಿದೆ. ಚಿಕ್ಕಬಳ್ಳಾಪುರ ಎಸ್ಪಿ ರಾಮ್ ಅರಸಿದ್ದಿ ನೇತೃತ್ವದಲ್ಲಿ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ. ಇನ್ನೂ ಇದೇ ಚಿಕ್ಕಬಳ್ಳಾಪುರ ಜಿಲ್ಲೆಯ ಚಾಕವೇಲು ಬಳಿಯ ವೆಂಕಟೇಶಪಲ್ಲಿ ಗ್ರಾಮದಲ್ಲೂ ಬೆಸ್ಕಾಂ ಜಾಗೃತ ದಳದ ಡಿಜಿಎಂ ಸುಧಾಕರ್ ರೆಡ್ಡಿ ಅವರ ಮಾವ ಹಿರಿಯ ವಕೀಲ ಕೃಷ್ಣಾರೆಡ್ಡಿ ನಿವಾಸದ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ..