ಬಳ್ಳಾರಿ: ಮಾನವನ ಸಂಶೋಧನೆ ಇಂದು ದಿನದಿಂದ ದಿನಕ್ಕೆ ಊಹಿಸದಷ್ಟು ಬೆಳೆಯುತ್ತಾ ಸಾಗಿದೆ. ಆದ್ರೂ ಇನ್ನು ಕೆಲವು ಕಡೆ ಮೂಡನಂಬಿಕೆ, ಅಂಧಭಕ್ತಿ, ವಾಮಾಚಾರದಂತ ಕೆಲಸವನ್ನು ಮುಂದುವರೆಸುತ್ತಿದ್ದಾರೆ. ಇದಕ್ಕೆ ನಿದರ್ಶನವೆಂಬಂತೆ ಗಣಿಜಿಲ್ಲೆ ಬಳ್ಳಾರಿ ನಗರದ ಮಾರ್ಕಂಡೇಶ್ವರ ಕಾಲೋನಿಯಲ್ಲಿ ವಾಮಾಚಾರ ಮಾಡಿಸಿ ಅನಾಮಿಕರು ದುಷ್ಟತನವನ್ನು ಮೆರೆದಿದ್ದಾರೆ. ಇದ್ರಿಂದ ಸಾರ್ವಜನಿಕರು ಭಯಭೀತರಾಗಿದ್ದಾರೆ. ಆಗಾದ್ರೇ ಏನಿದು ವಾಮಾಚಾರ…? ಎಲ್ಲಿ ಮಾಡಿಸಿದ್ದಾರೆ…..? ಯಾರು ಮಾಡಿಸಿದ್ದಾರೆ.? ಎನ್ಬುವುದ್ರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೇ ನೋಡಿ.
ಗಣಿ ಜಿಲ್ಲೆ ಬಳ್ಳಾರಿಯ ಮಾರ್ಕಂಡಯ್ಯ ಕಾಲೋನಿಯ ಅಂಗನವಾಡಿ ಕೆಂದ್ರದ ಮುಂದೆ ವಾಮಾಚಾರ ಮಾಡಿಸಿದ್ದಾರೆ. ಅಂಗನಾವಾಡಿ ಕೇಂದ್ರ ಮತ್ತು ಮಿನಿ ನೀರಿನ ಟ್ಯಾಂಕ್ ಮುಂದೆ ವಾಮಾಚಾರ ಮಿಡಿಸಿದ್ರಿಂದ ಅಂಗನವಾಡಿಗೆ ಮಕ್ಕಳನ್ನು ಕಳುಹಿಸಲು ಪೋಷಕರು ಹಿಂಜರಿಯುತ್ತಿದ್ದಾರೆ. ಅಷ್ಟೇ ಅಲ್ಲದೇ ಪಕ್ಕದ ಟ್ಯಾಂಕ್ಗೆ ಕುಡಿಯೋ ನೀರು ಹಿಡಿಯಲು ಯಾರು ಬರುತ್ತಿಲ್ಲ. ಸುಮಾರು ಆರು ತಿಂಗಳ ಹಿಂದೆ ಇದೇ ರೀತಿ ಮಾಡಿದ್ರು. ಮತ್ತೆ ಈಗ ಅದೇ ರೀತಿಯಾಗಿ ಗುರ್ತು ತಿಳಿಯದ ವ್ಯಕ್ತಿಗಳು ರಾತ್ರಿ ವೇಳೆ ಈ ರೀತಿ ಕೃತ್ಯ ವೇಸಗಿದ್ದಾರೆ ಎಂದು ಸುತ್ತಲಿನ ನಿವಾಸಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
Eye Care Tips: ಕಣ್ಣಿನ ರೆಪ್ಪೆಯಲ್ಲಾಗುವ ಕುರು ಸಮಸ್ಯೆಗೆ ಕಾರಣಗಳೇನು..? ಬಂದಾಗ ಏನು ಮಾಡಬೇಕು..? ಇಲ್ಲಿದೆ ಉತ್ತರ
ವಾಮಾಚಾರ ಮಾಡಿರುವುದನ್ನು ನೋಡಿದ ಕೆಲವರು ಕೂಡಲೇ ಭಯಭೀತರಾಗಿ, ಆ ಕಡೆ ಸಂಚರಿಸದಂತೆ ಸಾರ್ವಜನಿಕರಿಗೆ ತಿಳಿ ಹೇಳಿದ್ದಾರೆ. ಹಾಗೇ ಬ್ರೂಸ್ ಪೇಟೆ ಪೋಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಬಂದ ಪೋಲೀಸರು, ಆಗಿರುವ ಘಟನೆಯ ಬಗ್ಗೆ ಸಾರ್ವಜನಿಕರಿಗೆ ತಿಳಿ ಹೇಳುವ ಕಾರ್ಯ ಮಾಡಿದ್ದಾರೆ. ಇದೊಂದು ಮೂಡನಂಬಿಕೆ ಕೃತ್ಯ, ಈ ರೀತಿಯ ಕೃತ್ಯಗಳಿಗೆ ಭಯಪಡಬೇಕು. ಈ ರೀತಿ ಕೃತ್ಯ ವೇಸಗುವ ಮತ್ತು ಮಾಡುವವರನ್ನು ಅದಷ್ಟು ಬೇಗ ಪತ್ತೆ ಹಚ್ಚಲಾಗುವುದು ಎಂದು ವಾಮಾಚಾರಕ್ಕೆ ಬಳಸಿದ ವಸ್ತುಗಳನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.
ಆಧುನಿಕಥೆಯ ಈ ಕಾಲದಲ್ಲಿಯೂ, ಜನರು ಈ ರೀತಿ ವಾಮಾಚಾರಗಳನ್ನು ಮಾಡಿಸುತ್ತಿರುವುದು ಎಲ್ಲೋ ಒಂದು ಕಡೆ ಅವಿವೇಕತನದ ಪರಮಾವಧಿ ಎನ್ನಬಹುದು. ಇಲ್ಲಿನ ಜನರು ಭಯ ಭೀತರಾಗುವುದಕ್ಕಿಂತ ಮೊದಲೇ ಕೃತ್ಯಕ್ಕೆ ಕಾರಣವಾದವರನ್ನು ಪತ್ತೆ ಹಚ್ಚಿ ಶಿಕ್ಷೆಗೊಳಪಡಿಸಬೇಕು ಮತ್ತು ಈ ರೀತಿಯ ಕೃತ್ಯಗಳು ಮರುಕಳಿಸದಂತೆ ಹೆಚ್ಚರವಹಿಸಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ.