ರಾಯಚೂರು: ತಡರಾತ್ರಿ ಲಾರಿ ಪಲ್ಟಿಯಾದ ಪರಿಣಾಮ ಮೂವರು ಪಿಡಬ್ಲುಡಿ ಅಧಿಕಾರಿಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆ ಸಿಂಧನೂರು ಪಟ್ಟಣದ ಡಾಲರ್ಸ್ ಕಾಲೋನಿ ಬಳಿ ನಡೆದಿದೆ. ಮಲ್ಲಿಕಾರ್ಜುನ(29), ಶಿವರಾಜ್(28) ಹಾಗೂ ಮೆಹಬೂಬ್(30) ಮೃತ ಪಿಡಬ್ಲುಡಿ ಅಧಿಕಾರಿಗಳು,
ಲೋಕೋಪಯೋಗಿ ಇಲಾಖೆಯಲ್ಲಿ ಜೂನಿಯರ್ ಇಂಜಿನಿಯರ್ಗಳಾಗಿದ್ದ ಮಲ್ಲಿಕಾರ್ಜುನ, ಶಿವರಾಜು ಮತ್ತು ಕಂಪ್ಯೂಟರ್ ಆಪರೇಟರ್ ಆಗಿದ್ದ ಮೆಹಬೂಬ್ ರಾತ್ರಿ ಕೆನಲ್ ಡ್ಯೂಟಿ ಮುಗಿಸಿಕೊಂಡು ಮನೆಗೆ ಹೊರಟಿದ್ದರು. ರಸ್ತೆ ಬದಿ ಮೂವರು ಮಾತಾಡುತ್ತ ನಿಂತಿದ್ದರು.
Drumstick Tea Health Benefits: ನುಗ್ಗೆಸೊಪ್ಪಿನ ಚಹಾ ಕುಡಿಯೋದರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ..?
ಅದೇ ಮಾರ್ಗವಾಗಿ ಬಂದ ಹೊಟ್ಟು ತುಂಬಿದ್ದ ಲಾರಿ ಚಾಲಕನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ, ಮೂವರು ಅಧಿಕಾರಿಗಳ ಮೇಲೆ ಬಿದ್ದಿದೆ. ಲಾರಿ ಕೆಳಗೆ ಸಿಲುಕಿ ಮೂವರು ಸಾವನ್ನಪ್ಪಿದ್ದಾರೆ. ಸದ್ಯ ಲಾರಿ ಚಾಲಕನನ್ನ ವಶಕ್ಕೆ ಪಡೆದ ಸಿಂಧನೂರು ಟ್ರಾಫಿಕ್ ಪೊಲೀಸರು, ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.