ಬೆಂಗಳೂರು: ಹೊಸೂರು ಮುಖ್ಯ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರನ ದೇಹ ಛಿದ್ರ ಛಿದ್ರವಾಗಿರುವ ಘಟನೆ ಹೊಸೂರು ಮುಖ್ಯರಸ್ತೆ ದೊಡ್ಡ ತೋಗೂರು ಗೇಟ್ ಬಳಿ ನಡೆದಿದೆ. ಚಳ್ಳಕೆರೆ ಮೂಲದ ಬಸಪ್ಪ( 50) ಮೃತ ಬೈಕ್ ಸವಾರನಾಗಿದ್ದು,
ಬಸವನಪುರದಿಂದ ತೋಗೂರು ಕಡೆ ಸಾಗುತ್ತಿದ್ದಾಗ ಹಿಂಬದಿಯಿಂದ ವೇಗವಾಗಿ ಬಂದ ಟಿಬ್ಬರ್ ಬೈಕ್ ಗೆ ಡಿಕ್ಕಿ ಹೊಡೆದಿದೆ.
Gold Loans: ಕಡಿಮೆ ಬಡ್ಡಿ ದರದಲ್ಲಿ ಚಿನ್ನದ ಸಾಲ: ಟಾಪ್ 5 ಬ್ಯಾಂಕ್ʼಗಳು ಯಾವುವು ಗೊತ್ತಾ..?
ಬೈಕ್ ಸವಾರ ಕೆಳಗೆ ಬೀಳುತ್ತಿದ್ದಂತೆ ಟಿಪ್ಪರ್ ದೇಹದ ಮೇಲೆ ಹರಿದು ದೇಹ ಛಿದ್ರ ಛಿದ್ರವಾಗಿದೆ. ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ಟಿಪ್ಪರ್ ಚಾಲಕ ಮತ್ತು ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.