ರಾಯಚೂರು:- ಕುಂಭಮೇಳಕ್ಕೆ ಹೋಗಿದ್ದ ರಾಯಚೂರಿನ ವ್ಯಕ್ತಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ನಾಳೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ಇರಲ್ಲ ಕರೆಂಟ್: ನಿಮ್ಮ ಏರಿಯಾ ಇದೇನಾ!?
48 ವರ್ಷದ ಮಹಾದೇವ ವಾಲೇಕರ್. ಮಧ್ಯಪ್ರದೇಶದ ಮೇಹೂರ್ ಬಳಿ ಕಾರು ಇವರಿಗೆ ಡಿಕ್ಕಿ ಹೊಡೆದಿದ್ದರಿಂದ ಸಾವನ್ನಪ್ಪಿದ್ದಾರೆ. ರಾಯಚೂರು ತಾಲೂಕಿನ ಚಂದ್ರಬಂಡಾ ಗ್ರಾಮದ ನಿವಾಸಿಯಾಗಿದ್ದ ಮಹಾದೇವ ಕುಟುಂಬ ಸ್ನೇಹಿತರೊಂದಿಗೆ ಪ್ರಯಾಗ್ರಾಜ್ ಕುಂಭಮೇಳದಿಂದ ವಾಪಸ್ ಊರು ಕಡೆ ಬರುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದೆ.
ಮಹಾದೇವ ವಾಲೇಕರ್ ಅವರು ಪ್ರಯಾಣಿಸುತ್ತಿದ್ದ ಕಾರು ರಸ್ತೆ ಬದಿ ನಿಂತಿತ್ತು. ಕಾರಿನಲ್ಲಿದ್ದವರು ಕೆಳಗಡೆ ಇಳಿದಿದ್ದರು. ಈ ವೇಳೆ ರಸ್ತೆ ಬದಿ ನಿಂತಿದ್ದ ಮಹಾದೇವ ಮೇಲೆ ಹೈದರಾಬಾದ್ ಮೂಲದ ಕಾರು ಹರಿದಿದೆ.