ಪಾಟ್ನಾ: ಕಳ್ಳಭಟ್ಟಿ ಸೇವಿಸಿ 20 ಮಂದಿ ಸಾವಿಗೀಡಾಗಿರುವ ಘಟನೆ ಬಿಹಾರ ರಾಜ್ಯದ ಸಿವಾನ್ ಮತ್ತು ಸರನ್ ಜಿಲ್ಲೆಯಲ್ಲಿ ನಡೆದಿದೆ. ಅಧಿಕಾರಿಗಳ ಮಾಹಿತಿ ಪ್ರಕಾರ ಕಳ್ಳಭಟ್ಟಿ ಸೇವನೆಯಿಂದ 6 ಜನ ಸಾವನ್ನಪ್ಪಿದ್ದರು. 12 ಮಂದಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅಧಿಕಾರಿಗಳು ಮೃತರ ಹಾಗೂ ಚಿಕಿತ್ಸೆಗೆ ಒಳಪಟ್ಟವರ ಯಾವುದೇ ಗುರುತನ್ನು ಬಹಿರಂಗಪಡಿಸಿಲ್ಲ.
ಸಿವಾನ್ ಜಿಲ್ಲೆಯ ಮ್ಯಾಜಿಸ್ಟ್ರೇಟ್ ಮುಕುಲ್ ಕುಮಾರ್ ಗುಪ್ತಾ ಮಾತನಾಡಿ, ಮಘಾರ್ ಮತ್ತು ಔರಿಯಾ ಪಂಚಾಯತ್ ವ್ಯಾಪ್ತಿಯಲ್ಲಿ ಮೂವರು ಸಾವನ್ನಪ್ಪಿದ್ದು, ಬೆಳಗ್ಗೆ 7:30 ಸುಮಾರಿಗೆ ಮಾಹಿತಿ ಲಭಿಸಿದೆ. ತಕ್ಷಣವೇ ಸ್ಥಳಕ್ಕೆ ಅಧಿಕಾರಗಳ ತಂಡವನ್ನು ಕಳುಹಿಸಲಾಗಿದ್ದು, 12 ಜನರನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಯಿತು. ಈ ವೇಳೆ ಮಾರ್ಗಮಧ್ಯೆ ಇನ್ನೋರ್ವ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ.
Railway Jobs: ರೈಲ್ವೆ ಇಲಾಖೆಯಲ್ಲಿದೆ ಬಂಪರ್ ಉದ್ಯೋಗಾವಕಾಶ! ಲಿಖಿತ ಪರೀಕ್ಷೆ ಇಲ್ಲ – ತಿಂಗಳ ವೇತನ 2 ಲಕ್ಷ ರೂ/-
ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ವರದಿಯ ಬಳಿಕ ಸಾವಿಗೆ ನಿಖರ ಕಾರಣ ಏನು ಎಂಬುವುದನ್ನು ತಿಳಿಸಲಾಗುವುದು ಎಂದರು. ಸದ್ಯ ಎರಡು ಜಿಲ್ಲೆಯಲ್ಲಿ ಆಡಳಿತ ಮಂಡಳಿಯು ತನಿಖೆ ನಡೆಸುತ್ತಿದೆ. ಜೊತೆಗೆ ಮಘಾರ್ ಮತ್ತು ಔರಿಯಾ ಪಂಚಾಯಿತಿ ವ್ಯಾಪ್ತಿಯ ಇಬ್ಬರು ಚೌಕಿದಾರ್ರನ್ನು ಇಲಾಖೆಯು ಅಮಾನತುಗೊಳಿಸಿದೆ.