ಹಿರಿಯೂರು: ಕೆ ಆರ್ ಹಳ್ಳಿಗೇಟ್ ಬಳಿ ಬೆಳ್ಳಂಬೆಳಗ್ಗೆ ನಡೆದ ಭೀಕರ ಅಪಘಾತದಲ್ಲಿ ಚನ್ನಪಟ್ಟಣದ ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಚಂದ್ರಶೇಖರ್ ಮೃತಪಟ್ಟಿದ್ದಾರೆ. ಚಂದ್ರಶೇಖರ್ ಅವರ ಮಗನಿಗೆ ದಾವಣಗೆರೆಯಲ್ಲಿ ಮೆಡಿಕಲ್ ಸೀಟು ದೊರೆತಿದ್ದು,
ಮಗನನ್ನು ದಾವಣಗೆರೆಗೆ ಬಿಟ್ಟು ಬರಲು ಚನ್ನಪಟ್ಟಣ ದಿಂದ ದಾವಣಗೆರೆ ಕಡೆಗೆ ಹೋಗುವಾಗ ಕೆ ಆರ್ ಹಳ್ಳಿ ಗೇಟ್ ಬಳಿ ಮುಂದೆ ಹೋಗುತ್ತಿದ್ದ ಲಾರಿಗೆ ಹಿಂದಿನಿಂದ ರಭಸವಾಗಿ ಡಿಕ್ಕಿ ಹೊಡೆದಿದ್ದಾರೆ.
ಟೊಮೆಟೊ ಸಿಪ್ಪೆ ವೇಸ್ಟ್ ಅಂತ ಬಿಸಾಡಬೇಡಿ: ಇದರಲ್ಲಿ ಅಡಗಿದೆ ಆರೋಗ್ಯದ ಗುಟ್ಟು.!
ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಅವರು ಮೃತಪಟ್ಟಿದ್ದಾರೆ. ಕಾರು ಸಂಪೂರ್ಣ ನುಜ್ಜುಗಜ್ಜಾಗಿದೆ. ಗ್ರಾಮಾಂತರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.