7 ವರ್ಷಗಳ ನಂತರ ನಡೆಯುತ್ತಿರುವ ಟೂರ್ನಿಯಲ್ಲಿ ಟೀಮ್ ಇಂಡಿಯಾ ಪಾಲ್ಗೊಳ್ಳುತ್ತಿರುವುದು ಕ್ರಿಕೆಟ್ ಪ್ರಿಯರನ್ನು ಟೂರ್ನಿ ಕಡೆಗೆ ಆಕರ್ಷಿಸಲಿದೆ. 2024ರ ಆವೃತ್ತಿಯ ಹಾಂಕಾಂಗ್ ಸೂಪರ್ ಸಿಕ್ಸಸ್ ಟೂರ್ನಿಯು ನವೆಂಬರ್ 1ರಿಂದ 3ರವರೆಗೆ ಟಿನ್ ಕ್ವಾಂಗ್ ರೋಡ್ ರಿಕ್ರಿಯೇಷನ್ ಗ್ರೌಂಡ್ನಲ್ಲಿ ನಡೆಯಲಿದೆ. ಇದು ಟೂರ್ನಿಯ 20ನೇ ಆವೃತ್ತಿಯಾಗಿದೆ.
“ಹಾಂಕಾಂಗ್ ಸೂಪರ್ ಸಿಕ್ಸಸ್ (ಎಕ್ಕೆ6) ಟೂರ್ನಿಯಲ್ಲಿ ಟೀಮ್ ಇಂಡಿಯಾ ಪಾಲ್ಗೊಂಡು ಸಿಕ್ಸರ್ಗಳ ಸುರಿಮಳೆಗೈಯಲಿದೆ. ಫೋರ್-ಸಿಕ್ಸರ್ಗಳ ಸುರಿಮಳೆ ನೋಡಲು ಕಾಯುತ್ತಿರಿ. ಹೆಚ್ಚು ಹೆಚ್ಚು ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ಹೆಚ್ಚು ಮನೋರಂಜನೆ ಕಟ್ಟಿಟ್ಟಬುತ್ತಿ,” ಎಂದು ಹಾಂಕಾಂಗ್ ಕ್ರಿಕೆಟ್ ಮಂಡಳಿ ಟ್ವೀಟ್ ಮಾಡಿದೆ.
1992ರಲ್ಲಿ ಮೊದಲ ಬಾರಿ ಹಾಂಕಾಂಗ್ ಸೂಪರ್ ಸಿಕ್ಸಸ್ ಟೂರ್ನಿಯು ಆಯೋಜನೆ ಆಗಿತ್ತು. ಹಿಂದೆಲ್ಲಾ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಪಾಳ್ಗೊಳ್ಳುತ್ತಿದ್ದವು. ಈ ಬಾರು 12 ತಂಡಗಳು ಸ್ಪರ್ಧೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಕೇವಲ 6 ಓವರ್ಗಳ ಇನಿಂಗ್ಸ್ನಲ್ಲಿ ಕ್ರಿಕೆಟ್ ಲೋಕದ ಬೆಸ್ಟ್ ಬ್ಯಾಟರ್ಗಳು ಸ್ಪೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಪ್ರಿಯರಿಗೆ ಭರಪೂರ ಮನೋರಂಜನೆ ಒದಗಿಸಿದೆ.
ಸ್ಪೋಟಕ ಬ್ಯಾಟಿಂಗ್ಗೆ ಹಾಂಕಾಂಗ್ ಸೂಪರ್ ಸಿಕ್ಸಸ್ ಟೂರ್ನಿ ಹೆಸರುವಾಸಿ. ಇಲ್ಲಿ ಬೌಲರ್ಗಳ ಮಹತ್ವ ಬಹಳಾ ಕಡಿಮೆ ಏಕೆಂದರೆ ಬಂದ ಬ್ಯಾಟರ್ಗಳೆಲ್ಲಾ ಓವರ್ನ 6 ಎಸೆತಗಳಲ್ಲಿ ಸಿಕ್ಸರ್ ಬಾರಿಸುವ ಪ್ರಯತ್ನ ಮಾಡಲಿದ್ದಾರೆ. ಹೀಗಾಗಿ ಫೋರ್ ಸಿಕ್ಸರ್ಗಳ ಸುರಿಮಳೆಯೊಂದಿಗೆ ರನ್ ಹೊಳೆಯೇ ಹರಿಯಲಿದೆ. ಹೀಗಾಗಿ ಮೂರು ದಿನಗಳ ಕಾಲ ಕ್ರಿಕೆಟ್ ಪ್ರಿಯರಿಗೆ ಭರಪೂರ ಮನೋರಂಜನೆ ಕಟ್ಟಿಟ್ಟಬುತ್ತಿ.