ಹುಬ್ಬಳ್ಳಿ: ನಗರದಲ್ಲಿ ಹನಿಟ್ರ್ಯಾಪ್ ಮಾಡುತ್ತಿದ್ದ ಗ್ಯಾಂಗ್ ಬಂಧಿಸುವಲ್ಲಿ ಸಿಸಿಬಿ ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿಯ ಹೆಸರಾಂತ ಬಾಂಡೆ ಅಂಗಡಿ ವ್ಯಾಪಾರಿ ಆಗಿದ್ದ ಚಗನ್ ಲಾಲ್ ಚೌಧರಿಯ ಕೆಲವು ವಿಡಿಯೋ ಗಳನ್ನು ಮಾಡುಕೊಂಡು ನಂತರ ಬ್ಲಾಕ ಮೇಲ್ ಮಾಡುತ್ತಿದ್ದರು. ಎರಡು ಮೂರು ವಿಡಿಯೋ ತುಣುಕುಗಳನ್ನು ರೆಕಾರ್ಡ್ ಮಾಡಿಕೊಂಡು ಸುಮಾರು ಐದು ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ಇದರಿಂದ ಮನನೊಂದ ಚಗನ್ ಲಾಲ್ ಚೌಧರಿ ಅಶೋಕ ನಗರ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಚಗನ್ ಲಾಲ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಹನಿಟ್ರ್ಯಾಪ್ ಮಾಡಿದ್ದ ಐವರನ್ನು ಬಂಧಿಸಿದ್ದಾರೆ. ಬಂಧಿತರು ಮುಲ್ಲಾ ಓಣಿ ನಿವಾಸಿ ಜೋಯಾ ಶಬಾನಾ. ತೊರವಿ ಹಕ್ಕಲದ ಪರವಿನ್ ಭಾನು. ಡಾಕಪ್ಪ ಸರ್ಕಲ್ ನಿವಾಸಿ ಸಯೀದ್ ಹಾಗೂ ಹಳೆ ಹುಬ್ಬಳ್ಳಿಯ ನಿವಾಸಿಗಳಾದ ತೌಸಿಪ್ ಮತ್ತು ಅಬ್ದುಲ್ ರೆಹಮಾನ್ ಎಂಬುವರನ್ನು ಬಂಧಿಸಿದ್ದಾರೆ.
ನವರಾತ್ರಿಯ 7ನೇ ದಿನ “ದೇವಿ ಕಾಲರಾತ್ರಿ” ಪೂಜೆ ಮಾಡಿ ಬದುಕಿನಲ್ಲಿ ಪೂರ್ಣಪ್ರಮಾಣದ ಅಭಿವೃದ್ಧಿ ಪಡೆಯಿರಿ.!
ಸಯೀದ್, ತೌಸಿಪ್, ಅಬ್ದುಲ್ ರೆಹಮಾನ್ ಅಂಗಡಿ ಹೊರಗೆ ಹಾಕಿರುವ ನಂಬರಗಳನ್ನು ಕಲೆಕ್ಟ ಮಾಡಿ ಜೋಯಾ ಹಾಗು ಪರವಿನ್ ಗೆ ನೀಡುತ್ತಿದ್ದರು. ಇವರಿಬ್ಬರು ಅವರ ನಂಬರ್ ಗೆ ಮೆಸೆಜ ಕಾಲ ಮಾಡಿ ಸಲಿಗೆಯಿಂದ ಬಲೆಗೆ ಹಾಕಿಕೊಂಡು ಅವರ ಜೊತೆ ಇರುವ ವಿಡಿಯೋ ಗಳನ್ನು ಮಾಡಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದರು. ಇವರ ಕಿರುಕುಳದಿಂದ ಚಗನ್ ಲಾಲ್ ಅಶೋಕ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರೋ ಅವಾಗ ಗಂಭೀರವಾಗಿ ಪರಿಗಣಿಸಿ ಸಿಸಿಬಿ ಪೊಲೀಸರು ಹನಿಟ್ರ್ಯಾಪ್ ಮಾಡಿದ್ದ ಐವರನ್ನು ಬಂಧಿಸಿ ನ್ಯಾಯಾಙಗ ಬಂಧನಕ್ಕೆ ಒಪ್ಪಿಸಿದ್ದಾರೆ.