ಬೆಂಗಳೂರು:– 2023 ರ ಮೊದಲ ಒಂಬತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ 47,100 ಮನೆಗಳು ಮಾರಾಟವಾಗಿದೆ. 2022ರಲ್ಲಿ ಇದೇ ಅವಧಿಯಲ್ಲಿ 49,500 ಮನೆಗಳು ಮಾರಾಟವಾಗಿದ್ದವು, 2023ರ ಮೂರನೇ ತ್ರೈಮಾಸಿಕದಲ್ಲಿ 16,400 ಮನೆಗಳು ಮಾರಾಟವಾಗಿವೆ.
ಆಸ್ತಿ ಸಲಹಾ ಸಂಸ್ಥೆಯಾದ ಅನರಾಕ್ನ ಮಾಹಿತಿಯ ಪ್ರಕಾರ, ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ, ಮಾರಾಟವು 15,000 ಯುನಿಟ್ಗಳಿಂದ ಸುಮಾರು 10% ಹೆಚ್ಚಾಗಿದೆ ಎಂದು ದಿ ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿ ತಿಳಿಸಿದೆ.
ಇತ್ತೀಚಿನ ತ್ರೈಮಾಸಿಕದಲ್ಲಿ 14,800 ಮನೆಗಳು ಮಾರಾಟವಾಗಿದೆ. ಅದರಲ್ಲಿ ಕೇವಲ 1% ಮನೆಗಳು ರೂ 40 ಲಕ್ಷ ಅಥವಾ ಅದಕ್ಕಿಂತ ಕಡಿಮೆ ವೆಚ್ಚದವಾಗಿದ್ದರೆ, ಶೇಕಡ 64 ರಷ್ಟು ಮನೆಗಳ ಬೆಲೆ 80 ಲಕ್ಷದಿಂದ 1.5 ಕೋಟಿ ರೂ.ಗಳಷ್ಟಿತ್ತು, ಶೇ.23ರಷ್ಟು ಮನೆಗಳು 40 ಲಕ್ಷದಿಂದ 80 ಲಕ್ಷ ರೂ. ಬೆಲೆಯವು ಎಂದು ಹೇಳಿದೆ.
ಎರಡನೇ ತ್ರೈಮಾಸಿಕದಿಂದ ಮೂರನೇ ತ್ರೈಮಾಸಿಕದಲ್ಲಿ 30% ರಷ್ಟು ಹೆಚ್ಚಾಗಿದೆ, ಮೊದಲನೇ ತ್ರಮಾಸಿಕ ಮಾರಾಟಕ್ಕೆ ಹೋಲಿಕೆ ಮಾಡಿದರೆ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. “40 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಕಡಿಮೆ ಬೆಲೆಯ ಮನೆಗಳ ಪ್ರಮಾಣ, ಮಾರುಕಟ್ಟೆ ಪಾಲಿನ ಭಾಗವು ಕಡಿಮೆಯಾಗುತ್ತಿದೆ. ಬೆಂಗಳೂರಿನಲ್ಲಿ, ಪ್ರತಿಯೊಬ್ಬರೂ ವಿಶಾಲವಾದ ಮನೆಗಳನ್ನು ಹುಡುಕುತ್ತಿದ್ದಾರೆ ಮತ್ತು ನಾವು ಮೊದಲೇ ಚರ್ಚಿಸಿದಂತೆ, ಐಷಾರಾಮಿ ಮನೆಗಳ ಮಾರಾಟವು ಹೆಚ್ಚುತ್ತಿದೆ” ಎಂದು ಬೆಂಗಳೂರಿನ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಅಧ್ಯಕ್ಷ ಕಿಶೋರ್ ಜೈನ್ ಹೇಳಿರುವುದಾಗಿ ಹೇಳಿದೆ.
ಬೆಂಗಳೂರಿನ ಪೂರ್ವ ಭಾಗದಲ್ಲಿ ವಸತಿಗಳ ಮಾರಾಟ ಹೆಚ್ಚಿದೆ, ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ 22% ಹೆಚ್ಚಳ ದಾಖಲಿಸಿದೆ. ಬೆಂಗಳೂರಿನಲ್ಲಿ ಮಾರಾಟವಾದ ಒಟ್ಟು ಮನೆಗಳಲ್ಲಿ 54 ಪ್ರತಿಶತ ಮನೆಗಳು ಈ ಭಾಗದಲ್ಲಿ ಮಾರಾಟವಾಗಿದೆ.
ಉತ್ತರ ಬೆಂಗಳೂರು 26% ರಷ್ಟು ಪಾಲನ್ನು ಹೊಂದಿದೆ ಮತ್ತು 62% ಬೆಳವಣಿಗೆಯನ್ನು ದಾಖಲಿಸಿದೆ. ಏತನ್ಮಧ್ಯೆ, ದಕ್ಷಿಣ ಬೆಂಗಳೂರು 21% ಬೆಳವಣಿಗೆಯನ್ನು ಹೊಂದಿದೆ, ಇದು 17% ಪಾಲನ್ನು ಒಳಗೊಂಡಿದೆ. ಪಶ್ಚಿಮ ಬೆಂಗಳೂರು ಸ್ಥಿರತೆ ಕಾಯ್ದುಕೊಂಡಿದೆ.