ಬೆಂಗಳೂರು: ಬಿಜೆಪಿ (BJP) ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ (B.Y Vijayendra) ಆಯ್ಕೆಗೆ ತಕ್ಕಂತೆ ನಾವು ರಣ ನೀತಿ ರೂಪಿಸುತ್ತೇವೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ (G.Parameshwara) ಹೇಳಿದ್ದಾರೆ
Yadiyurappa: ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಹುದ್ದೆ ಸಿಗುತ್ತೆ ಅಂತ ನಾವ್ಯಾರು ನಿರೀಕ್ಷೆ ಇಟ್ಟಿರಲಿಲ್ಲ: BSY
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ಪಕ್ಷದ ಲೆಕ್ಕಾಚಾರದಲ್ಲಿ ರಾಜ್ಯಾಧ್ಯಕ್ಷರನ್ನು ಮಾಡಿದ್ದಾರೆ. ನಾನು ವಿಜಯೇಂದ್ರ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ರಾಜ್ಯದ ವಿಪಕ್ಷವಾಗಿ ಒಂದಷ್ಟು ಧನಾತ್ಮಕ ವಿಚಾರ ಇಟ್ಟುಕೊಂಡು ನಮಗೆ ಸಲಹೆ ಸೂಚನೆ ಕೊಡಲಿ. ನಾವು ತಪ್ಪು ಮಾಡಿದರೆ ಎತ್ತಿ ಹಿಡಿಯಲಿ ಎಂದಿದ್ದಾರೆ.
ಬೇರೆ ಬೇರೆ ಕ್ಷುಲ್ಲಕ ಕಾರಣಕ್ಕೆ ಮಾತಾಡುವುದು ನಿಂತು ಒಳ್ಳೆಯ ರಾಜಕಾರಣದ ವ್ಯವಸ್ಥೆ ಮಾಡಿಕೊಂಡರೆ ರಾಜ್ಯದಲ್ಲಿ ಒಳ್ಳೆಯದಾಗುತ್ತದೆ. ನಾನು ಅದನ್ನು ನಿರೀಕ್ಷೆ ಮಾಡುತ್ತೇನೆ. ಮುಂದಿನ ಬೆಳವಣಿಗೆ ಹೇಗೆ ಎಂದು ನೋಡೋಣ ಎಂದಿದ್ದಾರೆ.