ಬೆಂಗಳೂರು:- ಐಷಾರಾಮಿ ಜೀವನಕ್ಕೆ ಮನೆಗಳವು ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಅನ್ನು ನಗರದ ವಿದ್ಯಾರಣ್ಯಪುರ ಪೊಲೀಸರು ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ರಘು@ಪೆಪ್ಸಿ, ದೀಪಕ್, ಮಿಥುನ್ ಬಂಧಿತ ಆರೋಪಿಗಳು ಎನ್ನಲಾಗಿದೆ. ಆರೋಪಿಗಳು ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಕದಿಯುತ್ತಿದ್ದರು. ನಂತರ ಕದ್ದ ಬೈಕ್ ಗಳನ್ನ ಮನೆಗಳವು ಮಾಡಲಿಕ್ಕೆ ಬಳಕೆ ಮಾಡ್ತಿದ್ರು. ಅಲ್ಲದೇ ಕದ್ದ ಮಾಲಲ್ಲಿ ಬಂದ ಹಣದಿಂದ ಬ್ರಾಂಡೆಡ್ ಬಟ್ಟೆ, ಶೂ ಖರೀದಿಸಿ ಊಟಿ ಗೆ ಜಾಲಿ ಟ್ರಿಪ್ ಮಾಡುತ್ತಿದ್ದರು.
ಇದೀಗ ಆರೋಪಿಗಳು ಅರೆಸ್ಟ್ ಆಗಿದ್ದು, ಬಂಧಿತರಿಂದ 16.60 ಲಕ್ಷ ಮೌಲ್ಯದ ಮೂರು ಬೈಕ್, ಎರಡು ಕೆಜಿ ಬೆಳ್ಳಿ ಹಾಗೂ 200 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿಗಳಿಂದ ಎರಡು ಮನೆಗಳವು ಹಾಗೂ ಮೂರು ಬೈಕ್ ವಶಕ್ಕೆ ಪಡೆಯಲಾಗಿದೆ.
ಆರೋಪಿಗಳ ವಿರುದ್ಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ