ಈ ವರ್ಷ ಎರಡು ಚಂದ್ರಗ್ರಹಣಗಳು ಸಂಭವಿಸಲಿದೆ. ಅದರಲ್ಲಿ ಮೊದಲ ಚಂದ್ರಗ್ರಹಣ ಇದೇ ಮಾರ್ಚ್ 25 ರಂದು ಸಂಭವಿಸಲಿದೆ, ಎರಡನೇ ಚಂದ್ರಗ್ರಹಣವು ಸೆಪ್ಟೆಂಬರ್ 18, 2024 ರಂದು ಗೋಚರಿಸಲಿದೆ.
ಮಾರ್ಚ್ 25, 2024 ರಂದು ಸಂಭವಿಸಲಿರುವ ಗ್ರಹಣವು ಪೆನಂಬ್ರಲ್ (ತೀವ್ರವಲ್ಲದ ಅಥವಾ ಭಾಗಶಃ) ಚಂದ್ರಗ್ರಹಣವಾಗಿರುತ್ತದೆ, ಇಲ್ಲಿ ಚಂದ್ರನು ಭೂಮಿಯ ಪೆನಂಬ್ರಾಲ್ ನೆರಳಿನ ಮೂಲಕ ಹಾದುಹೋಗುತ್ತದೆ. ಈ ಗ್ರಹಣವು ಪೆನಂಬ್ರಲ್ ಆಗಿರುವುದರಂದ ಅದು ಚಂದ್ರನ ಅತ್ಯಂತ ಸೂಕ್ಷ್ಮವಾದ ನೆರಳು ಮತ್ತು ಬರಿಗಣ್ಣಿಗೆ ಗೋಚರಿಸದಿರಬಹುದು.
ಪೆನಂಬ್ರಲ್ ಚಂದ್ರಗ್ರಹಣವು ಭಾರತೀಯ ಪ್ರಮಾಣಿತ ಸಮಯ (IST) ಬೆಳಿಗ್ಗೆ 10:24ಕ್ಕೆ ಪ್ರಾರಂಭವಾಗುತ್ತದೆ, ನಂತರ ಮಧ್ಯಾಹ್ನ 12:43 IST ಕ್ಕೆ ಗರಿಷ್ಠವನ್ನು ತಲುಪುತ್ತದೆ ಮತ್ತು 3:01ಕ್ಕೆ ಮುಕ್ತಾಯವಾಗುತ್ತದೆ.
ಚಂದ್ರನು ದಿಗಂತದ ಕೆಳಗೆ ಇರುವಾಗ ಹಗಲಿನ ಸಮಯದಲ್ಲಿ ಸಂಭವಿಸುವ ಕಾರಣದಿಂದಾಗಿ ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಬದಲಾಗಿ, ಯುರೋಪ್, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾದ ಭಾಗಗಳಲ್ಲಿ ಹಾದುಹೋಗುತ್ತದೆ.
ಈ ಬಾರಿಯ ಚಂದ್ರಗ್ರಹಣ ಹೋಳಿ ಹಬ್ಬದಂದು ಸಂಭವಿಸಲಿದೆ. ಹೀಗಾಗಿ ಇದನ್ನು ಮಂಗಳಕರ ಎಂದು ಹೇಳಲಾಗುತ್ತಿದೆ.