ಚಾಮರಾಜನಗರ:- ಭಾರೀ ಮಳೆಗೆ ಕಾವೇರಿ ಹಾಗೂ ಕಬಿನಿ ಜಲಾಶಯದ ಭಾಗಗಳಲ್ಲಿ ನೀರಿನ ಹೊರಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಕರ್ನಾಟಕದ ಗಡಿಭಾಗವಾದ ಹನೂರು ತಾಲೂಕಿನ ಹೊಗೇನಕಲ್ ಜಲಪಾತದ ದೃಶ್ಯ ವೈಭವ ನೋಡುಗರ ಕಣ್ಮಣ ಸೆಳೆಯುವಂತಿದೆ.
ಭಾರೀ ಮಳೆ ನೀರಿನ ಪರಿಣಾಮವಾಗಿ ಕರ್ನಾಟಕ ತಮಿಳುನಾಡು ಗಡಿ ಭಾಗದಲ್ಲಿರುವಂತಹ ಹೊಗೇನಕಲ್ ಜಲಪಾತವೇ ಮುಳುಗಡೆಯಾಗಿದೆ. ನದಿ ಪಾತ್ರದಲ್ಲಿ 1.20 ಲಕ್ಷ ಕ್ಯೂಸೆಕ್ ನೀರು ಕಾವೇರಿ ನದಿಯ ಹೊರಹರಿವು ಇರುವುದರಿಂದ ಹೊಗೆನಕಲ್ ಜಲಪಾತಕ್ಕೆ ಅಪಾರ ಪ್ರಮಾಣವಾದ ನೀರು ತಮಿಳುನಾಡಿನತ್ತ ಹರಿಯುತ್ತಿದೆ.
ನದಿಯ ನೀರು ಬಾರೀ ಪ್ರಮಾಣದಲ್ಲಿ ಹೊಗೆನಕಲ್ ಜಲಪಾತಕ್ಕೆ ಹರಿದುಬರುತ್ತಿರುವ ಕಾರಣ ಪ್ರವಾಸಕ್ಕೆ ಆಗಮಿಸುವಂತಹ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಜಿಲ್ಲಾಡಳಿತವು ಈಗಾಗಲೆ ನಿರ್ಭಂಧ ಏರಿಸಲಾಗಿದೆ.
ಒಂದೆಡೆ ಪ್ರವಾಸಿಗರಿಗೆ ನಿರ್ಭಂಧ ಮತ್ತೊಂದೆಡೆ ಭೋರ್ಗರೆಯುವ ಜಲಪಾತ ನೋಡುಗರಿಗೆ ರುದ್ರರಮಣೀಯವೆನಿಸಿದೆ.