ಬೆಂಗಳೂರು: ಚೀನಾದಲ್ಲಿ ಹೆಚ್ಚುತ್ತಿರುವ HMPV ವೈರಸ್ ತಡೆಗಟ್ಟುವ ಮುಂಜಾಗ್ರತಾ ಕ್ರಮದ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಟಾಸ್ಕ್ ಫೋರ್ಸ್ ಸದಸ್ಯರೊಂದಿಗೆ ಆರೋಗ್ಯ ಸೌಧದಲ್ಲಿ ಸಭೆ ನಡೆಸಿದ್ರು. ಸಭೆ ನಂತರ ಸುದ್ದಿಗೋಷ್ಟಿ ನಡೆಸಿದ ದಿನೇಶ್ ಗುಂಡೂರಾವ್ HMPV ವೈರಸ್ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ಅಗ್ತಿದೆ ಜನ ಕೂಡ ಅತಂಕ ಪಟ್ಟಿದಾರೆ ಅಂತ ಮಾಹಿತಿ ಬಂದಿದೆ.
ಸದ್ಯ ಎರಡು ಕೇಸ್ ನಗರದ ಖಾಸಗಿ ಆಸ್ಪತ್ರೆ ಯಲ್ಲಿ ಪತ್ತೆಯಾಗದೆ, ಈ ವೈರಸ್ ನಮ್ಮ ದೇಶದಲ್ಲಿ ಮೊದಲ್ಲಿನಿಂದ ಇದೆ ಇದು ಮೊದಲು ಅಲ್ಲ. ಉಸಿರಾಟದ ತೊಂದ್ರೆ, ಶ್ವಾಸಕೋಶದ ತೊಂದ್ರೆ, ಹೀಗೆ ಹಲವು ರೀತಿಯಲ್ಲಿ ಬರುತ್ತೆ.
ಇದು ಹಾನಿಕರ ವೈರಸ್ ಅಲ್ಲ ಇದು 2001 ರಲ್ಲಿ ಪತ್ತೆ ಅಗಿತ್ತು. ಕೆಲ ತಪಾಸಣೆ ಮಾಡಿದಾಗ ಕೇವಲ ಒಂದು ಪರ್ಸೆಂಜ್ ಬರುತ್ತೆ ಅಂತ ಗೊತ್ತಾಗಿದೆ, ವೈರಸ್ ಬಂದ ಮಕ್ಕಳಲ್ಲಿ ಒಬ್ಬರು ಡಿಸ್ಚಾರ್ಜ್ ಅಗಿದಾರೆ. ಮತ್ತೊಂದು ಮಗು ನಾಳೆ ಡಿಸ್ಚಾರ್ಜ್ ಅಗುತ್ತೆ, ಸದ್ಯ ಯಾವುದೇ ಅತಂಕ ಪಡುವ ಅಗತ್ಯ ಇಲ್ಲ. ಮಾಸ್ಕ್ ಯಾವುದೇ ಕಂಪಲ್ಸರಿ ಇಲ್ಲ. ಚಳಿಗಾಲದಲ್ಲಿ ನಿಮ್ಮ ಮಕ್ಕಳ ಬಗ್ಗೆ ಗಮನ ಇರಲ್ಲಿ, ಈ ವೈರಸ್ ಜೀವಕ್ಕೆ ಯಾವುದೇ ಅಪಾಯ ಇಲ್ಲ.
ಈ ವೈರಸ್ ರೂಪಾಂತರಿ ಅಗಿದ್ಯೋ ಇಲ್ಲವೋ ಅಂತ ವರದಿ ಬರಬೇಕು. HMP ವೈರಸ್ ಗುಣಲಕ್ಷಣಗಳ ಬಗ್ಗೆ ಪುಣೆಗೆ ಟೆಸ್ಟ್ ಗೆ ಕಳುಹಿಸಲಾಗಿದೆ. ಮಕ್ಕಳಿಗೆ ಹಾಗೂ ವಯಸ್ಸಾದವರಲ್ಲಿ ಈ ಸೋಂಕು ಹೆಚ್ಚು ಬರುತ್ತೆ ಯಾವುದೇ ರ್ಯಾಂಡಮ್ ಟೆಸ್ಟ್ ಮಾಡಲ್ಲ. ಕೇಂದ್ರ ಸರ್ಕಾರ ಸದ್ಯ ಯಾವುದೇ ಸೂಚನೆ ಕೊಟ್ಟಿಲ್ಲ, ಏರ್ ಪೋರ್ಟ ಬಸ್ ನಿಲ್ದಾಣಗಳಲ್ಲಿ ಯಾವುದೇ ಬಗೆಯ ಟೆಸ್ಟ್ ಮಾಡಲ್ಲ. ಸದ್ಯ ಯಾವುದೇ ಅಪಾಯಕಾರಿ ಇಲ್ಲ ಮಕ್ಕಳ ಪೋಷಕರು ಎಚ್ಚರಿಕೆ ವಹಿಸಬೇಕು ಯಾವುದೇ ಭಯ ಪಡಬೇಕಾಗಿಲ್ಲ ಎಂದು ಹೇಳಿದ್ರು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್.