ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ HIV ಪ್ರಮಾಣ ಹೆಚ್ಚಾಗುತ್ತಿದ್ದು, ಅತಿ ಹೆಚ್ಚು ಯುವಕರು ಏಡ್ಸ್ ರೋಗಕ್ಕೆ ತುತ್ತಾಗುತ್ತಿದ್ದಾ ತುತ್ತಾಗುತ್ತಿದ್ದಾರೆ.
ಕೊಲೆ ಕೇಸ್ ನಲ್ಲಿ ಡಿ ಗ್ಯಾಂಗ್.. ದರ್ಶನ್ ಮೇಲೆ ಓಪನ್ ಆಗುತ್ತಾ ರೌಡಿ ಶೀಟರ್..!?..
ಎಚ್ಐವಿ ಒಂದು ಜಾಗತಿಕ ಆರೋಗ್ಯ ಸಮಸ್ಯೆಯಾಗಿದೆ. ಇದು ಸಮಸ್ಯೆಯಾಗಿಯೇ ಮುಂದುವರೆದಿದೆ. ಯಾಕಂದರೆ ಈ ವೈರಸ್ಗೆ ಸೂಕ್ತವಾದ ಔಷಧಿ ಇಲ್ಲ. ವಿಶ್ವಾದ್ಯಂತ ಸುಮಾರು 40 ದಶಲಕ್ಷಕ್ಕೂ ಅಧಿಕ ಜನ ಈ ಸೋಂಕು ಪೀಡಿತರಾಗಿದ್ದಾರೆ. ಸರ್ಕಾರವೂ ಇದರ ನಿಯಂತ್ರಣಕ್ಕೆ ಸತತ ಪ್ರಯತ್ನ ಮಾಡುತ್ತಲೇ ಇದೆ. ಆದರೆ ಜನರ ಜಾಗೃತಿ ಕೊರತೆ, ಏಡ್ಸ್ ಬಗ್ಗೆ ಕಡಿಮೆಯಾಗುತ್ತಿರುವ ಭಯ ಈಗ ಮತ್ತೆ ಯುವಕರಲ್ಲಿ ಏಡ್ಸ್ ಏರಿಕೆಗೆ ಕಾರಣವಾಗಿದೆ.
ರಾಜ್ಯದಲ್ಲಿ ಎಚ್ಐವಿ ಸೋಂಕಿತರು ಅತಿ ಹೆಚ್ಚು ಬೆಂಗಳೂರು ನಗರದಲ್ಲಿಯೇ ಪತ್ತೆಯಾಗುತ್ತಿರುವ ಬಗ್ಗೆ ಆರೋಗ್ಯ ಇಲಾಖೆ ಆತಂಕ ವ್ಯಕ್ತಪಡಿಸಿದೆ. ಅದರಲ್ಲೂ ಅವಿವಾಹಿತರಲ್ಲಿಯೇ ಎಚ್ಐವಿ ಸೋಂಕು ಹೆಚ್ಚಾಗುತ್ತಿದೆ. ಮದುವೆಗೂ ಮುನ್ನವೇ ಯುವಕರಲ್ಲಿ ಎಚ್ಐವಿ ಸೋಂಕು ಹೆಚ್ಚಾಗಿ ಪತ್ತೆಯಾಗುತ್ತಿದೆ. ರಾಜ್ಯದಲ್ಲಿ 1.85 ಲಕ್ಷ ಸೋಂಕಿತರಿದ್ದಾರೆ. ಇದರಲ್ಲಿ ನವವಿವಾಹಿತರೇ ಹೆಚ್ಚಿದ್ದಾರೆ
ಬೆಂಗಳೂರಿನಲ್ಲಿ ಶೇ 20 ರಿಂದ 25 ರಷ್ಟು ಯುವಕರಲ್ಲಿಯೇ ಸೋಂಕು ಕಾಣಿಸಿಕೊಂಡಿದೆ. 14 ವರ್ಷಕ್ಕಿಂತ ಕೆಳಗಿನ ವಯಸ್ಸಿನವರಲ್ಲಿಯೂ ಈಗ ಹೆಚ್ಚಾಗಿ ಎಚ್ಐವಿ ಕಂಡುಬರುತ್ತಿದೆ. ರಾಜ್ಯದಲ್ಲಿ ಬೆಂಗಳೂರು ಹಾಗೂ ಕೋಲಾರ ಬೆಳಗಾವಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಅತಿಯಾದ ಮಾದಕ ವ್ಯಸನ ಹಾಗೂ ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಹೆಚ್ಚಾಗಿ ಏಡ್ಸ್ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಶಾಲೆ ಹಾಗೂ ಕಾಲೇಜುಗಳಲ್ಲಿ ಕೂಡಾ ಈ ಬಗ್ಗೆ ಅರಿವು ಮೂಡಿಸಲು ಆರೋಗ್ಯ ಇಲಾಖೆ ಮುಂದಾಗಿದೆ
ಮಲ್ಲೇಶ್ವರಂ ಕೆಸಿ ಜನರಲ್ ಆಸ್ಪತ್ರೆಯೊಂದರಲ್ಲಿಯೇ ಕಳೆದ ಒಂದು ವರ್ಷದಲ್ಲಿ 18555 ಜನರಿಗೆ ಎಚ್ಐವಿ ಟೆಸ್ಟ್ ಮಾಡಲಾಗಿದೆ. ಇದರಲ್ಲಿ 267 ಜನರಿಗೆ ಪಾಸಿಟಿವ್ ಕಂಡುಬಂದಿದ್ದು, ಇದರಲ್ಲಿ 12 ಗರ್ಭಿಣಿಯರಲ್ಲಿ ಸೋಂಕು ಕಂಡು ಬಂದಿದೆ. ಬೆಂಗಳೂರಿನಲ್ಲಿಯೇ ಅತಿ ಹೆಚ್ಚು ಪ್ರಕರಣ ಈ ಅಸ್ಪತ್ರೆಯಲ್ಲಿ ಪತ್ತೆಯಾಗಿದೆ.