ರಾಂಚಿ: ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ (England) ವಿರುದ್ಧದ 4ನೇ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ಟೀಂ ಇಂಡಿಯಾ (Team India) ನಾಯಕ ರೋಹಿತ್ ಶರ್ಮಾ (Rohit Sharma) ಟೆಸ್ಟ್ ಕ್ರಿಕೆಟ್ನಲ್ಲಿ 4,000 ರನ್ಗಳನ್ನು ಪೂರೈಸಿ ವಿಶೇಷ ಸಾಧನೆ ಮಾಡಿದ್ದಾರೆ.
India Vs England: ಇತಿಹಾಸದಲ್ಲೇ ಭಾರತದ ಟೆಸ್ಟ್ ಕ್ರಿಕೆಟ್’ನಲ್ಲಿ ದಾಖಲೆ ಬರೆದ ರವಿಚಂದ್ರನ್ ಅಶ್ವಿನ್..!
![Demo](https://ainlivenews.com/wp-content/uploads/2023/12/spoorthi-1.jpg)
ಈ ಮೂಲಕ 4000 ರನ್ಗಳನ್ನು ಪೂರೈಸಿದ ಟೀಂ ಇಂಡಿಯಾ 17ನೇ ಆಟಗಾರ ಹಾಗೂ ವೇಗವಾಗಿ 4,000 ರನ್ ಗಳಿಸಿದ ಭಾರತದ 11ನೇ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೇವಲ 79 ಇನ್ನಿಂಗ್ಸ್ಗಳಲ್ಲಿ 4,000 ರನ್ಗಳಿಸಿದ ಸಾಧನೆ ಮಾಡಿದ್ದರು
2013ರಲ್ಲಿ ಟೆಸ್ಟ್ಗೆ ಪಾದಾರ್ಪಣೆ ಮಾಡಿದ್ದ ರೋಹಿತ್ ಇದುವರೆಗೆ ಭಾರತ ಪರ 58 ಪಂದ್ಯಗಳನ್ನು ಆಡಿದ್ದಾರೆ. ಪ್ರಸ್ತುತ ಟೆಸ್ಟ್ ಕ್ರಿಕೆಟ್ನಲ್ಲಿ 44ಕ್ಕಿಂತ ಹೆಚ್ಚು ಸರಾಸರಿ ಹೊಂದಿದ್ದಾರೆ. ಅವರು 2019ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗಳಿಸಿದ 212ರ ಅತ್ಯಧಿಕ ಸ್ಕೋರ್ನೊಂದಿಗೆ ದೀರ್ಘ ಸ್ವರೂಪದಲ್ಲಿ 11 ಶತಕಗಳು ಮತ್ತು 16 ಅರ್ಧಶತಕಗಳನ್ನು ಗಳಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 4ನೇ ಪಂದ್ಯದಲ್ಲಿ ರೋಹಿತ್ 21 ರನ್ ಗಳಿಸುವ ಮೂಲಕ 4,000 ರನ್ ಗಡಿ ಮುಟ್ಟಿದರು. ಈ ಸಾಧನೆಯೊಂದಿಗೆ, ಇಂಗ್ಲೆಂಡ್ ವಿರುದ್ಧ 1,000 ರನ್ಗಳನ್ನು ಪೂರೈಸಿದ್ದಲ್ಲೇ ತವರಿನಲ್ಲಿ 2,200ಕ್ಕೂ ಹೆಚ್ಚು ರನ್ಗಳನ್ನು ಗಳಿಸಿದ ಸಾಧಕರೂ ಎನಿಸಿಕೊಂಡಿದ್ದಾರೆ.
![](https://ainlivenews.com/wp-content/uploads/2024/01/Ad-Banner-copy-scaled.jpg)