ಚಿಕ್ಕಬಳ್ಳಾಪುರ:- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ನಂದಿ ಮೋರಿ ಬಳಿ ಹಿಟ್ ಅಂಡ್ ರನ್ ಸಂಭವಿಸಿ, ತಾಯಿ ಸಾವು, ಮಗು ಸ್ಥಿತಿ ಗಂಭೀರವಾಗಿರುವ ಘಟನೆ ಜರುಗಿದೆ.
ಘಟನೆ ಬಳಿಕ ಚಾಲಕ ಕಾರಿನ ಸಮೇತ ಎಸ್ಕೇಪ್ ಆಗಿದ್ದಾನೆ. 4 ವರ್ಷದ ಮಗು ಮನೋಜ್ ಸ್ಥಿತಿ ಗಂಭೀರವಾಗಿದೆ. ಮಗುವಿನ ತಲೆಗೆ ಪೆಟ್ಟಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮೃತಳ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ.