ಬೆಂಗಳೂರು:- ಕೆ.ಆರ್ ಮಾರ್ಕೆಟ್ನ ಬಿಜಿಎಸ್ ಫ್ಲೈಓವರ್ ಮೇಲೆ ರಸ್ತೆ ಅಪಘಾತ ಸಂಭವಿಸಿದೆ.ಇನ್ನೋವಾ ಕಾರೊಂದು ಅತೀ ವೇಗವಾಗಿ ಬಂದು ಆಟೋಗೆ ಡಿಕ್ಕಿಯಾದ ಘಟನೆ ಜರುಗಿದೆ.
ಇಲ್ಲಿ ಕೇಳಿ ಜನರೇ: ಇಷ್ಟು ಮೊತ್ತದ ಹಣವನ್ನು ಬ್ಯಾಂಕ್ ಅಕೌಂಟ್ಗೆ ಹಾಕಿದ್ರೆ IT ನೋಟಿಸ್ ಗ್ಯಾರಂಟಿ!
ಕಾರು ಡಿಕ್ಕಿಯಾದ ರಭಸಕ್ಕೆ ಆಟೋ ಸಂಪೂರ್ಣ ಜಖಂ ಆಗಿದ್ದು, ಆಟೋ ಚಾಲಕ ವಸೀಂ ಪಾಷಾ ಅವರ ಕಾಲು ಮುರಿದಿದೆ. ಅಪಘಾತದ ಬಳಿಕ ಕಾರು ಚಾಲಕ ನಿಲ್ಲಿಸದೇ ಪರಾರಿಯಾಗಿದ್ದಾನೆ. ಹಿಂದಿನಿಂದ ವೇಗವಾಗಿ ಬಂದ ಕಾರು ಆಟೋಗೆ ಡಿಕ್ಕಿಯಾಗಿ ಘಟನೆ ಸಂಭವಿಸಿದೆ.
ಅಪಘಾತದ ಸಮಯದಲ್ಲಿ ವಾಹನ ಓಡಾಟ ಕಡಿಮೆ ಇದ್ದ ಕಾರಣ ಭಾರೀ ಅನಾಹುತ ತಪ್ಪಿದೆ. ಗಾಯಗೊಂಡ ಆಟೋ ಚಾಲಕನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಚಾಮರಾಜಪೇಟೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.