ಬಾಗಲಕೋಟೆ: ಈ ಬಾರಿಯ ಹೋಳಿ ಹಬ್ಬವು ವಿನೂತನ ಹಾಗು ವಿಶೇಷತೆಯಿಂದ ಕೂಡಿ ಒಂದೇ ಸೂರಿನಲ್ಲಿ 10 ಸಾವಿರಕ್ಕೂ ಅಧಿಕ ಜನ ಬಣ್ಣದೋಕಳಿ ಆಡಿರುವದು ಇತಿಹಾಸ ನಿರ್ಮಿಸುವಲ್ಲಿ ಕಾರಣವಾಯಿತು.
ಮಂಗಳವಾರ ಬೆಳ್ಳಂಬೆಳಿಗ್ಗೆಯಿಂದಲೇ ತಂಡೋಪತಂಡವಾಗಿ ಸುತ್ತಲಿನ ಗ್ರಾಮಸ್ಥರು ಅದರಲ್ಲೂ ಮಹಿಳೆಯರು ಅಧಿಕ ಪ್ರಮಾಣದಲ್ಲಿ ಸಾವಿರಾರು ಜನ ಬಾಗಲಕೋಟೆಯಲ್ಲಿ ಹರಿದು ಬರುತ್ತಿರುವದು ಸಹಜವಾಗಿತ್ತು.ಇಡೀ ನಗರವನ್ನು ಬಣ್ಣದಿಂದ ಮಿಂದೇಳುವಲ್ಲಿ ಕಾರಣವಾಯಿತು.
ಮಾನವ ದೇಹದ ಫಿಟ್ನೆಸ್ನಲ್ಲಿ ಬಣ್ಣಗಳು ಪ್ರಮುಖ ಪಾತ್ರ ವಹಿಸುತ್ತವೆ. ನಿದಿಷ್ಟ ಬಣ್ಣದಕೊರತೆಯು ರೋಗಕ್ಕೆ ಕಾರಣವಾಗಬಹುದು, ಆದರೆ ಆಹಾರ ಮತ್ತು ಔಷಧದ ಮೂಲಕ ಪೂಕರವಾಗಿದ್ದರೆ ಆ ಬಣ್ಣದ ಅಂಶವನ್ನು ಸರಿಪಡಿಸಬಹುದು. ಪ್ರಾಚೀಣ ಕಾಲದಿಂದಲೂ ಹೋಳಿ ಹಬ್ಬ ಆಚರಣೆಯಲ್ಲಿದೆ. ನೈಸರ್ಗಿಕ ಮೂಲಗಳಾದ ಅರಿಶಿನ, ಬೇವು, ತೇಸು ಇತ್ಯಾದಿಗಳಿಂದ ತಯಾರಿಸಲಾಗುತ್ತಿದೆ. ಇದು ಒಂದು ಆರೋಗ್ಯದ ಗುಟ್ಟು ಎಂದರು.
ಬಣ್ಣದೋಕಳಿ ಸಾವಿರಾರು ಜನರ ಮಧ್ಯ ವಿಜೃಂಭಣೆಯಿಂದ ಜರುಗಿದ್ದು ವಿಶೇಷವೆನಿಸುತ್ತಿದೆ ಎಂದು ಬಣ್ಣಪ್ರಿಯರು ಹೇಳಿದರು.
ಪ್ರಕಾಶ ಕುಂಬಾರ
ಬಾಗಲಕೋಟೆ