ಹಾವೇರಿ:- ಕರ್ನಾಟಕ ಜನತೆಗೆ ಮೈಲಾರಲಿಂಗೇಶ್ವರ ಜಾತ್ರೆಯ ಕಾರ್ಣಿಕ ಶುಭ ಸುದ್ದಿ ಕೊಟ್ಟಿದೆ.
ಮಧುಮೇಹಿಗಳ ಗಮನಕ್ಕೆ: ಸಕ್ಕರೆ ಮಾತ್ರವಲ್ಲ, ನಿಮಗೆ ಈ ಆಹಾರಗಳೂ ವಿಷಕ್ಕೆ ಸಮಾನ..!
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಆಡೂರು ಮೈಲಾರಲಿಂಗೇಶ್ವರ್ ಜಾತ್ರೆ ಸಂಭ್ರಮದಿಂದ ನಡೆದಿದ್ದು, ಸಾವಿರಾರು ಸಂಖ್ಯೆಯ ಭಕ್ತರು ಪಾಲ್ಗೊಂಡು ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ಜಾತ್ರೆಯಲ್ಲಿ ಕಾರ್ಣಿಕ ನುಡಿಯಲಾಗಿದೆ.
12 ಅಡಿ ಎತ್ತರದ ಬಿಲ್ಲೇರಿದ ಗೊರವಯ್ಯ ಹನುಮಗೌಡ ಗುರೇಗೌಡರು ದೈವವಾಣಿ ನುಡಿದಿದ್ದು, ‘ನೀರಿನ ಕೊಡ ಉರಡತಲೇ, ತುಪ್ಪದ ಕೊಡ ಉಕ್ಕತಲೇ ಪರಾಕ್’ ಎಂದು ನುಡಿದಿದ್ದಾರೆ. ಮೈಲಾರ ಕಾರ್ಣಿಕದ ಅರ್ಥವನ್ನು ಗ್ರಾಮಸ್ಥರು ತಿಳಿಸಿದ್ದು ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆ ಬೆಳೆಯಾಗಲಿದೆ ಎಂದಿದೆ.
ಕಳೆದ ಬಾರಿ ಮುಂಗಾರು ಮತ್ತು ಹಿಂಗಾರು ಉತ್ತಮವಾಗಿದ್ದ ಕಾರಣ ರಾಜ್ಯದಲ್ಲಿ ನೀರಿನ ಸಮಸ್ಯೆ ಇರಲಿಲ್ಲ. ಮುಖ್ಯವಾಗಿ ಎಲ್ಲಾ ಜಲಾಶಯಗಳು ಭರ್ತಿಯಾಗಿದ್ದು ಬೇಸಿಗೆಯಲ್ಲೂ ಈ ಬಾರಿ ನೀರಿಗೆ ಸಮಸ್ಯೆ ಇರುವುದಿಲ್ಲ ಎಂದು ನಿರೀಕ್ಷೆ ಮಾಡಲಾಗಿದೆ. ಇನ್ನು ಈ ವರ್ಷ ಕೂಡ ಉತ್ತಮ ಮಳೆಯಾದರೆ ರಾಜ್ಯದ ಕೆರೆ ಕಟ್ಟೆಗಳು ಭರ್ತಿಯಾಗಲಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಲಿದೆ.