ಗದಗ:-ಹುಬ್ಬಳ್ಳಿ ನೇಹಾ ಹಿರೇಮಠ ಕೊಲೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಜುಮನ್ ಇಸ್ಲಾಂ ಕಮಿಟಿ ವಿರುದ್ಧ ಪ್ರಮೋದ್ ಮುತಾಲಿಕ್ ಆಕ್ರೋಶ ಹೊರಹಕಿದ್ದಾರೆ.
ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ – ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ!
ಗದಗ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುತಾಲಿಕ್, ಅಂಜುಮನ್ ಇಸ್ಲಾಂನವರು, ಮೊಸಳೆ ಕಣ್ಣೀರು ಹಾಗೂ ನಾಟಕವಾಡಿದ್ದಾರೆ. ನಿಮಗೆ ನಿಜವಾಗಿ ಕಳಕಳಿಯಿದ್ರೆ, ಹಿಂದೆ ನಡೆದ ಘಟನೆಗಳಿಗೆ ಯಾಕೇ ಬಾಯಿಬಿಟ್ಟಿಲ್ಲಾ. ನೇಹಾ ಹಿರೇಮಠ ಕಾಂಗ್ರೆಸ್ ಕಾರ್ಪೋರೆಟರ್ ಮಗಳು ಎನ್ನುವದಕ್ಕೆ ಮಾತನಾಡುತ್ತಿದ್ದೀರಿ. ಈ ಹಿಂದೆ ಹರ್ಷಾ, ಪ್ರವೀಣ್ ನೆಟ್ಟಾ, ಹುಬ್ಬಳ್ಳಿ ಗಲಾಟೆ, ಕಾಂಗ್ರೆಸ್ನ್ ಶಾಸಕರ ಮನೆ ಸುಟ್ಟು ಹಾಕಲಾಯಿತು. ಆವಾಗ ಯಾಕೇ ಬಾಯಿ ಬಂದಾಗಿತ್ತು ಅಂಜುಮನ್ ಇಸ್ಲಾಂನವರದ್ದು
ನಿಮಗೆ ನಿಜವಾದ ಕಳಕಳಿಯಿದ್ರೆ, ಆರೋಪಿಯ ಮನೆ ಧ್ವಂಸ ಮಾಡಿ. ಅವರನ್ನು ಬಹಿಷ್ಕಾರ ಹಾಕಿ, ಅದು ಇಲ್ಲಾ ಕೇವಲ ನಾಟಕ ಮಾಡಬಾಡಿ. ಪತ್ವಾ ಹೊರಡಿಸಿ ಎಂದು ಪ್ರಮೋದ್ ಮುತಾಲಿಕ್ ಸವಾಲ್ ಹಾಕಿದ್ದಾರೆ.
22 ರಂದು ಇಡೀ ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಾಗಿ ಮನವಿ ಮಾಡಿದ್ದಾರೆ. ಈ ರಾಜ್ಯದಲ್ಲಿ ಹಿಂದೂ ವಿರೋಧಿ ಸರ್ಕಾರ ಇದೆ. ಹೀಗಾಗಿ ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಬರಬೇಕು. ಮುಸ್ಲಿಂ ಕಿಡಿಗೇಡಿಗಳಿಗೆ ಈ ಸರ್ಕಾರದಲ್ಲಿ ರಕ್ಷಣೆ ಸಿಗ್ತಾಯಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂಗಳಿಗೆ ಭದ್ರತೆ ಇಲ್ಲಾ. ಹಿಂದೂ ದ್ರೋಹಿ ಈ ಕಾಂಗ್ರೆಸ್ ಸರ್ಕಾರ ಎಂದು ಕಿಡಿಕಾರಿದರು. ಕಾಂಗ್ರೆಸ್ ಮುಸ್ಲಿಂ ಪರವಾದ ಸರ್ಕಾರ ಎಂದು ಕಿಡಿಕಾರಿದ್ದಾರೆ