ಗದಗ: ಹಿಂದೂ ರಾಷ್ಟ್ರ ಮಾಡೋದು ಬಿಜೆಪಿ ಅಜೆಂಡಾ ಅಲ್ಲಾ ಹಿಂದೂ ರಾಷ್ಟ್ರ ಮಾಡೋದು ದೇಶದ ಹಿಂದೂಗಳ ಅಜೆಂಡಾ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ತಿರುಗೇಟು ನೀಡಿದ್ದಾರೆ
ನಗರದಲ್ಲಿ ಮಾತನಾಡಿದ ಅವರು, ದೇಶದ ಹಿಂದೂಗಳು ಹಿಂದೂ ರಾಷ್ಟ್ರ ಆಗ್ಬೇಕು ಎಂದು ನಿರ್ಧಾರ ಮಾಡಿದ್ದಾರೆ ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಬೇಕು ಇವತ್ತಿನ ತೀರ್ಮಾನ ಅಲ್ಲಾ, ಸ್ವಾತಂತ್ರ್ಯ ಪೂರ್ವದಿಂದ ಹೋರಾಟ ಮಧುರಾ, ಕಾಶಿಯಲ್ಲಿ ಎಲ್ಲವನ್ನೂ ಹೊಡೆದು ಹಾಕಿದ್ರಲ್ಲಾ ಮುಸಲ್ಮಾನರು ಅದನ್ನೆಲ್ಲಾ ಉಳಿಸಬೇಕೆಂದು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಸ್ವರ್ಗದಲ್ಲಿ ಇರೋದು ಅವರೆಲ್ಲ ಆತ್ಮಕ್ಕೆ ಈವಾಗ ಶಾಂತಿ ಸಿಗ್ತಾಯಿದೆಯಲ್ವಾ ಎಂದರು.
ಜನವರಿ 22 ಕ್ಕೆ ಅಯೋಧ್ಯೆಯಲ್ಲಿ ಇಡೀ ಪ್ರಪಂಚ ನೋಡುವ ಕೆಲಸ ಆಗುತ್ತೇ ಕಾಶಿ ಕುರಿತು ಕೋರ್ಟ್ ಆಡರ್ ಆಗಿದೆ, ಮಧುರಾ ಬಗ್ಗೆ ಸರ್ವೇ ಕೊಟ್ಟಿದ್ದಾರೆ ದೇಶದಲ್ಲಿ ಹೊಸ ಮಸೀದಿಗಳ ಬಗ್ಗೆ ನಾನು ವಿರೋಧ ಮಾಡೋದಿಲ್ಲ ನಮ್ಮ ದೇವಸ್ಥಾನಗಳನ್ನು ಹೊಡೆದು ಮಸೀದಿ ಕಟ್ಟಿದ್ದಾರಲ್ಲ ಆ ಮಸೀದಿ ಉಳಿಸಲ್ಲಾ ಈ ದೇಶದಲ್ಲಿ ಒಂದೇ ಒಂದು ಮಸೀದಿಯನ್ನು ಉಳಿಸೋದಿಲ್ಲ ಇದು ನನ್ನ ವ್ಯಕ್ತಿಕವಾದ ಅಭಿಪ್ರಾಯ ಎಂದು ಹೇಳಿದರು.
ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ರಕ್ತವನ್ನು ಹಂಚಿಕೊಂಡವರು ನಾವು ನಮ್ಮಲ್ಲಿ ಟಿಪ್ಪು ರಕ್ತ ಇಲ್ಲಾ, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದರ ರಕ್ತ ಅಯೋಧ್ಯೆ, ಕಾಶಿ ಮಧುರಾ, ಇಂತಹ ವಿಶೇಷ ದೇವಸ್ಥಾನಗಳನ್ನು ನಾವು ಉಳಿಸುತ್ತೇವೆ ಎಂದರು.
ಹಾಗೆ ಸಿಎಂ ಸಿದ್ದರಾಮಯ್ಯ ಬಿಜೆಪಿ ಸುಳ್ಳಿನ ಕಾರ್ಖಾನೆ ಹೇಳಿಕೆ ವಿಚಾರ ಬಗ್ಗೆ ಮಾತನಾಡಿ, ಅವರು ಸುಳ್ಳಿನ ಕಾರ್ಖಾನೆ ಅಂತಾ ಹೇಳ್ತಾರೆ, ಅದನ್ನು ಜನ ನಂಬಿದ್ರಾ.? ಮೂರು ರಾಜ್ಯದಲ್ಲಿ ಜನ್ರು ಬಿಜೆಪಿಯನ್ನು ಅಧಿಕಾರಕ್ಕೆ ತಂದ್ರು ಆ ಮೂರು ರಾಜ್ಯದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಏನು ಈವಾಗ ಜಿನ್ನಾ ಸಂತತಿಯ ಸಚಿವ ಜಮೀರ್ ಅಹ್ಮದ್, ತೆಲಂಗಾಣದಲ್ಲಿ ಏನೂ ಹೇಳಿದಾ ರಾಜ್ಯದಲ್ಲಿ ಮುಸಲ್ಮಾನ ಒಂದು ಮಾಡಿದ್ದೇವೆ, ಮುಸಲ್ಮಾನ ಇಬ್ಬರನ್ನೂ ಸ್ಪೀಕರ್ ಸ್ಥಾನದಲ್ಲಿ ಕುಡಿಸಿದ್ದೇವೆ ಎಲ್ಲಾ ಶಾಸಕರು ಅವರಿಗೆ ನಮಸ್ಕಾರ ಮಾಡಬೇಕು, ನಾವು ಮುಸಲ್ಮಾನರನ್ನು ನಮಸ್ಕಾರ ಮಾಡಿಕೊಂಡು ಹೋಗುತ್ತೇವೆ ನಾವು, ಇಲ್ಲಾ ಆ ಸಭಾಪತಿ ಸ್ಥಾನಕ್ಕೆ ಸಿಎಂ ಸಿದ್ದರಾಮಯ್ಯ ಅವರು ಅದನ್ನು ಎನಕ್ರಿಜ್ ಮಾಡ್ತಾರೆ ಅವರು ಹೇಳಿರೋದು ಸರಿ ಅಂತಾ ಸಿದ್ದರಾಮಯ್ಯ ಹೇಳ್ತಾರೆ ಎಂದು ಸಿದ್ದು ವಿರುದ್ಧ ಕಿಡಿ ಕಾರಿದರು.
ಸಿದ್ದರಾಮಯ್ಯ ಬಳಿ ಪ್ರಧಾನಿ ಮೋದಿ ಡಿಕೆಶಿ ಹೆಸರು ಪ್ರಸ್ತಾಪ ವಿಚಾರ ಬಗ್ಗೆಯೂ ಮಾತನಾಡಿ, ಡಿಕೆಶಿ ಹೆಸರು ಪ್ರಸ್ತಾಪದ ಬಗ್ಗೆ ವ್ಯಂಗ ಮಾಡಿದ ಕೆಎಎಸ್ ಈಶ್ವರಪ್ಪ ಯಾಕೆ ಕೇಳಿದ್ದಾರೆ ಅಂತ ನನಗೆ ಗೊತ್ತಿಲ್ಲಾ ಎರಡು ಥರ ಪ್ರಖ್ಯಾತಿ ಇರಬೇಕುಒಬ್ಬ ಶಿವಾಜಿ ಆಗಿರಬೇಕು ಇನ್ನೂಬ್ಬ ಅಫ್ಜಲ್ ಖಾನ್ ಆಗಿರಬೇಕು ಇಬ್ಬರೂ ಪ್ರಖ್ಯಾತಿ ಪಡೆದಿರುವವರೇ ಆದ್ರೆ, ಒಬ್ಬ ರಾಷ್ಟ್ರ ಭಕ್ತ ಇನ್ನೂಬ್ಬ ಅಂತ ಕಾಮೆಂಟ್ ಮಾಡಲ್ಲ ಎಂದು ಎದ್ದು ಹೋದ ಈಶ್ವರಪ್ಪ. ಪರೋಕ್ಷವಾಗಿ ಡಿಕೆಶಿಯನ್ನ ಅಪ್ಜಲ್ ಖಾನ್ ಗೆ ಹೋಲಿಸಿದ ಈಶ್ವರಪ್ಪ