ಹುಬ್ಬಳ್ಳಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯವರಿಗೆ ಮಾತನಾಡಲು ಹಿಂದೂ-ಮುಸ್ಲಿಂ ವಿಷಯ ಬಿಟ್ಟರೆ ಬೇರೆ ಏನಿಲ್ಲ ಎಂದು ಸಚಿವ ಸಂತೋಷ ಲಾಡ್ ಕಿಡಿಕಾರಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಐಎಸ್ಐ ರಾಜ್ಯವಾ? ಇದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ತಿಳಿಯೋದಿಲ್ವಾ? ಅವರು ಲೋಕಸಭಾ ಸದಸ್ಯರಾಗಿ ಏನೇನೂ ಮಾತನಾಡುತ್ತಾರೆ? ಇದು ಸಂಪೂರ್ಣವಾಗಿ ತಪ್ಪು ಎಂದು ಹರಿಹಾಯ್ದರು.
ಇದಕ್ಕಿಂತ ಒಳ್ಳೆ ಸೇವಿಂಗ್ಸ್ ಮತ್ತೊಂದಿಲ್ಲ..! ದಿನಕ್ಕೆ 50 ರೂಪಾಯಿ ಉಳಿಸಿ 30 ಲಕ್ಷ ನಿಮ್ಮದಾಗಿಸಿಕೊಳ್ಳಿ.!
ಸಿದ್ದರಾಮಯ್ಯ ರಾಜ್ಯದ ಉತ್ತಮ ಮುಖ್ಯಮಂತ್ರಿಯಾಗಿದ್ದಾರೆ. ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಸಾವನ್ನಪ್ಪಿದ ಹಿಂದೂಗಳನ್ನು ಶವ ಸಂಸ್ಕಾರ ಮಾಡಿದ್ದು ಮುಸ್ಲಿಂರು ಅವಾಗ ಎಲ್ಲಿದ್ದರೂ ಹಿಂದೂವಾದಿಗಳು, ಇದರ ಬಗ್ಗೆ ಯಾರು ಚರ್ಚೆ ಮಾಡುತ್ತಾರಾ? ಅದರ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಲಿ ಎಂದು ಸವಾಲ್ ಹಾಕಿದರು. ಇದೀಗ ಚುನಾವಣೆ ಬಂದಿದೆ ಅದಕ್ಕೆ ಮಾತನಾಡತ್ತಾರೆ. ಇವರಿಗೆ ಮತ ಬೇಕು ಮತಗಳನ್ನು ತೆಗೆದುಕೊಳ್ಳಲಿ, ಅದು ಬಿಟ್ಟು ಬಾಯಿಗೆ ಬಂದಂತೆ ಹಿಂದೂ-ಮುಸ್ಲಿಂ ಜಾತಿ ಮಾಡುವುದು ಸರಿಯಲ್ಲ ಎಂದರು.