ಶಿವಮೊಗ್ಗ: ಸರಿಸುಮಾರು ಎರಡು ವರ್ಷಗಳ ನಂತರ ಹಿಂದೂ ಹರ್ಷನ ಕೊಲೆಯ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಇದೀಗ ಈ ಪ್ರಕರಣದಲ್ಲಿ ಸಾಕ್ಷಿದಾರನೊಬ್ಬನಿಗೆ ಆರೋಪಿಗಳು ಸಾಕ್ಷ್ಯ ಹೇಳದಂತೆ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ : THE BHARATIYA NYAYA SANHITA (BNS), 2023 (U/s-351(2)) ಅಡಿಯಲ್ಲಿ ಕೇಸ್ ದಾಖಲಾಗಿದೆ.
ಹರ್ಷದ ಕೊಲೆ ಕೇಸ್ನಲ್ಲಿ NIA ನಡೆಸಿದ ತನಿಖೆಯಲ್ಲಿ, ಹರ್ಷ ಕೊಲೆಯಾದ ದಿನದಂದು ಆರೋಪಿಗಳು ಶಿವಮೊಗ್ಗ ನಗರದ ಪೆಟ್ರೋಲ್ ಬಂಕ್ ಒಂದಕ್ಕೆ ಬಂದು ಕಾರಿಗೆ ಡೀಸೆಲ್ ಹಾಕಿಸಿಕೊಂಡು ಹೋಗಿರುವ ವಿಚಾರ ನಮೂದು ಮಾಡಲಾಗಿದೆ. ಅಲ್ಲದೆ ಈ ವಿಚಾರದಲ್ಲಿ ಓರ್ವ ಯುವಕನನ್ನ ಸಾಕ್ಷಿ ಮಾಡಲಾಗಿದೆ. ಸದ್ಯ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಕೋರ್ಟ್ನಲ್ಲಿ ಕೇಸ್ ಎವಿಡೆನ್ಸ್ ಹಂತಕ್ಕೆ ತಲುಪಿದೆ.
Custard Apple for diabetes: ಡಯಾಬಿಟೀಸ್ ಇರುವವರು ಸೀತಾಫಲ ತಿನ್ನಬಹುದೇ.? ವೈದ್ಯರು ಹೇಳೋದೇನು..?
ಈ ನಡುವೆ ಸಾಕ್ಷಿ ಹೇಳಬೇಕಿದ್ದ ಯುವಕನ ಸ್ನೇಹಿತನ ಬಳಿಗೆ ಬಂದ ಕೆಲವು ಆರೋಪಿಗಳು ಯುವಕನಿಗೆ ಸಾಕ್ಷಿ ಹೇಳದಂತೆ ತಿಳಿಸಬೇಕು, ಆತ ಸಾಕ್ಷಿ ಹೇಳಬಾರದು ಎಂದು ಎಚ್ಚರಿಕೆ ನೀಡಿ ಹೋಗಿದ್ದರಂತೆ. ಇದನ್ನ ಕೇಳಿದ ಯುವಕ ಕೋರ್ಟ್ನಲ್ಲಿ ಸಾಕ್ಷ್ಯ ಹೇಳಿ ಬಂದ ಬಳಿಕ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ನೀಡಿದ್ದಾನೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.