ಶಿಮ್ಲಾ: ಉತ್ತರ ಭಾರತದಲ್ಲೂ ರಣಭೀಕರ ಮಳೆಯಾಗುತ್ತಿದೆ. ಹಿಮಾಚಲ ಪ್ರದೇಶದಲ್ಲಿ (Himachal Pradesh) ಕುಂಭದ್ರೋಣ ಮಳೆ ಕಾರಣ ಮೇಘಸ್ಫೋಟ ಉಂಟಾಗಿದೆ.
ಶಿಮ್ಲಾದ ಸಮೇಜ್ಖಾಡ್ ಬಳಿಯ ಪಾರ್ವತಿ ನದಿಯಲ್ಲಿ ದಿಢೀರ್ ಪ್ರವಾಹ ಉಂಟಾಗಿದ್ದು, ಎಲ್ಲವೂ ಕೊಚ್ಚಿ ಹೋಗಿದೆ. ಕೆಸರುಮಣ್ಣು ಸಹಿತ ಜಲಸ್ಫೋಟದ ಧಾಟಿಗೆ ಐವರು ಸಾವಿಗೀಡಾಗಿದ್ದು, ಕನಿಷ್ಠ 50 ಮಂದಿ ಕಣ್ಮರೆಯಾಗಿದ್ದಾರೆ.
ಹೊಸದಾಗಿ ಮದುವೆಯಾಗುವವರಿಗೆ ಸಿಗಲಿದೆ ಗುಡ್ ನ್ಯೂಸ್: ಕೇಂದ್ರ ಸರ್ಕಾರದಿಂದ 2.50 ಲಕ್ಷ ರೂ.ಪ್ರೋತ್ಸಾಹ ಧನ
ನೋಡನೋಡುತ್ತಲೇ ಕಟ್ಟಡಗಳು ಧರೆಗುರುಳಿವೆ. ಬಿಯಾಸ್ ನದಿ ಅಪಾಯದ ಮಟ್ಟ ಮೀರಿದ ಕಾರಣ ಮಲನಾ ಡ್ಯಾಂ ಹೆಚ್ಚು ಕಡಿಮೆ ನಾಶವಾಗಿದೆ. ಪಂದೋ ಡ್ಯಾಂನಿಂದ ಅಪಾರ ಪ್ರಮಾಣದಲ್ಲಿ ನೀರು ರಿಲೀಸ್ ಮಾಡಲಾಗಿದೆ. ಉತ್ತರಾಖಂಡದಲ್ಲೂ ಮೇಘಸ್ಫೋಟವಾಗಿದ್ದು, ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿತಗಳು ಸಂಭವಿಸಿವೆ.
ಗೌರಿಕುಂಡ್-ಸೋನ್ಪ್ರಯಾಗ್ ನಡುವಿನ ರಸ್ತೆ ಸಂಪೂರ್ಣ ಹಾನಿಗೊಂಡಿದೆ. ಕೇದಾರ್ನಾಥದ ಮಾರ್ಗ ಕೊಚ್ಚಿ ಹೋಗಿವೆ. ಪ್ರತ್ಯೇಕ ಘಟನೆಗಳಲ್ಲಿ ಕನಿಷ್ಠ 24 ಮಂದಿ ಬಲಿ ಆಗಿದ್ದಾರೆ. ಮಾರ್ಗ ಮಧ್ಯೆ ಸಿಲುಕಿದ್ದ ಭಕ್ತರನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸುವ ಕಾರ್ಯ ನಡೆದಿದೆ.