ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ ದಾಖಲಾಗಿದೆ. ಮೊದಲ ಬಾರಿಗೆ ಫೆಬ್ರವರಿ ತಿಂಗಳ ಮಧ್ಯದಲ್ಲಿ ಗರಿಷ್ಠ ಉಷ್ಣಾಂಶ 33.5 ಡಿಗ್ರಿ ಸೆಲ್ಸಿಯಸ್ಗೆ ತಲುಪಿದೆ.
ಗುರುವಾರ ತಾಪಮಾನ 33.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಇದು ಪೆಬ್ರವರಿ ತಿಂಗಳಲ್ಲಿ ದಾಖಲಾದ ಗರಿಷ್ಠ ತಾಪಮಾನ ಎಂದು ಹವಾಮಾನ ಇಲಾಖೆ ವರದಿ ಮಾಡಿತ್ತು. ಆದರೆ ಇವತ್ತು ಮತ್ತೆ ದಾಖಲೆ ಮುರಿದು, ಬೆಂಗಳೂರು ಉಷ್ಣಾಂಶ 33.5 ಡಿಗ್ರಿಗೆ ತಲುಪಿದೆ.
ಸಾಮಾನ್ಯವಾಗಿ ಫೆಬ್ರವರಿ ಅಂತ್ಯದ ವೇಳೆಗೆ ಬೆಂಗಳೂರು ಗರಿಷ್ಠ ಉಷ್ಣಾಂಶ ವಾಡಿಕೆಯಂತೆ 29 ಡಿಗ್ರಿಗೆ ಬರುತ್ತಿತ್ತು. ಇದೀಗ ತಿಂಗಳ ಮಧ್ಯದಲ್ಲೇ ತಾಪಮಾನ 33ಕ್ಕೆ ಡಿಗ್ರಿ ಸೆಲ್ಸಿಯಸ್ ತಲುಪಿದೆ.