ಬೆಂಗಳೂರು:- ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.
ಸೈಬರ್ ವಂಚಕರ ಹೊಸ ಪ್ಲ್ಯಾನ್: ವಾಟ್ಸಪ್ ಬಂದ ಲಿಂಕ್ ಓಪನ್ ಮಾಡದೇ ಇದ್ರೂ ಫೋನ್ ಹ್ಯಾಕ್!
ಇದೇ ವಿಚಾರವಾಗಿ ಸಚಿವ ಹೆಚ್ ಸಿ ಮಹದೇವಪ್ಪ ಮಾತನಾಡಿ, ಸಿಎಂ ಮತ್ತು ನಾವು ಕಾನೂನನನ್ನ ಗೌರವಿಸುತ್ತೇವೆ. ಆದ್ರೆ ಈ ಕೇಸ್ ನಲ್ಲಿ ರಾಜಕೀಯ ಮಾಡೋದನ್ನೇ ಗುರಿ ಇತ್ತು. ಆದ್ರೀಗ ಹೈಕೋರ್ಟ್ ಎಲ್ಲಾ ಅಂಶಗಳನ್ನು ಪರಾಮರ್ಶಿಸಿ ಅರ್ಜಿ ವಜಾ ಗೊಳಿಸಿದೆ.
ಹಿಂದೆ ಮತ್ತು ಈಗಲೂ ನಾವು ಆದೇಶ ಗೌರವಿಸುತ್ತೇವೆ. ಸದ್ಯ ನಾವು ಲೋಕಾಯುಕ್ತಕ್ಕೆ ಗೌರವ ನೀಡಬೇಕು. ಅದೊಂದು ಸ್ವತಂತ್ರ ಸಂಸ್ಥೆ. ಇದನ್ನ ರಾಜಕೀಯ ಉದ್ಧೇಶದಿಂದ ವಿರೋಧ ಮಾಡುತ್ತಲೇ ಬಂದಿದ್ದಾರೆ. ಇದಕ್ಕೂ, ಸಿಎಂ ಸ್ಥಾನಕ್ಕೂ ಸಂಬಂಧ ಇಲ್ಲ ಇದು ವಿರೋಧ ಪಕ್ಷ ಗಳು ಸಿಎಂ ಅವರನ್ನ ಜಾರಿತ್ರಗೊಳಿಸೋ ಷಡ್ಯಂತ್ರ ಅಷ್ಟೇ ಎಂದು ಮಹದೇವಪ್ಪ ಹೇಳಿದ್ದಾರೆ.