ಬೆಂಗಳೂರು:- ರಾಜ್ಯದ ಪರಿಸ್ಥಿತಿ ಬಗ್ಗೆ ಹೈಕಮಾಂಡ್ ವರದಿ ತರಿಸಿಕೊಳ್ಳುತ್ತೆ ಎಂದು DCM ಡಿಕೆ ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಏನು ನಡೆಯುತ್ತಿದೆ ಎಲ್ಲಾ ಮಾಹಿತಿ ಹೈಕಮಾಂಡ್ಗೆ ಹೋಗುತ್ತಿದೆ. ಅದಕ್ಕಾಗಿಯೇ ಒಂದು ತಂಡವಿದೆ. ಇಲ್ಲಿಂದ ಮಾಹಿತಿ ಕೊಡುತ್ತಿರುತ್ತಾರೆ. ಅದೇ ರೀತಿ ಹೈಕಮಾಂಡ್ಗೆ ತನಗೆ ಬೇಕಾದ ಮಾಹಿತಿಯನ್ನ ತರಿಸಿಕೊಳ್ಳುತ್ತಿರುತ್ತದೆ ಎಂದು ಹೇಳಿದರು.
ಹಿಂದುಳಿದ ಜಾತಿಯವನು 2 ಬಾರಿ ಸಿಎಂ ಆದ್ನಲ್ಲಾ ಅಂತ ಬಿಜೆಪಿಗೆ ಹೊಟ್ಟೆ ಉರಿ: ಸಿದ್ದರಾಮಯ್ಯ ಕಿಡಿ!
ಖರ್ಗೆ ಮತ್ತು ಸತೀಶ್ ಜಾರಕಿಹೊಳಿ ಭೇಟಿ ವಿಚಾರವಾಗಿ ಮಾತನಾಡಿ, ನಮ್ಮ ಪಾರ್ಟಿ ಲೀಡರ್ನಾ ಭೇಟಿ ಮಾಡದೆ ಇನ್ ಯಾವ ಅಧ್ಯಕ್ಷರನ್ನ ಭೇಟಿ ಮಾಡ್ತಾರೆ? ನಾನು ದೆಹಲಿಗೆ ಹೋದಾಗೆಲ್ಲ ಅಧ್ಯಕ್ಷರನ್ನ, ನಮ್ಮ ನಾಯಕರನ್ನ ಭೇಟಿ ಮಾಡ್ತೇನೆ. ದಿನಾ ಭೇಟಿ ಮಾಡುತ್ತಿರುತ್ತೇನೆ. ಇಲ್ಲಿ ಏನೇನು ಬೆಳವಣಿಗೆ ಆಗುತ್ತದೆಯೋ, ಅದರ ವರದಿ ದೆಹಲಿಗೆ ಹೋಗಲಿದೆ. ಅದಕ್ಕಾಗಿ ಪ್ರತ್ಯೇಕ ಸಂಶೋಧನಾ ತಂಡವಿದೆ. ಮಾಧ್ಯಮಗಳಲ್ಲಿ ಏನೇನು ಬರುತ್ತದೆ ಅದನ್ನ ಕಳಿಸುತ್ತಾರೆ. ಪಕ್ಷದ ಕಾರ್ಯಕರ್ತರ, ಶಾಸಕರು, ಸಚಿವರ ಭೇಟಿ ಸಹಜವಾಗಿ ಮಾಡ್ತಾರೆ. ಪೊಲಿಟಿಕಲ್ ಪ್ರಾಬ್ಲಮ್, ಆಡಳಿತ ಸಮಸ್ಯೆಗಳ ಇರ್ತಾವೆ. ಅಭಿವೃದ್ಧಿ ಸಮಸ್ಯೆಗಳು ಇರ್ತಾವೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಏನೇನಾಗುತ್ತಿದೆ ಎಂಬ ಬಗ್ಗೆ ಹೈಕಮಾಂಡ್ ವರದಿಯನ್ನ ತರಿಸಿಕೊಳ್ಳುತ್ತೆ. ಎಲ್ಲವನ್ನೂ ನೋಡಿ ಸುಮ್ಮನೆ ಕೂರೋದಿಲ್ಲ. ಆಗಿಂದಾಗ್ಗೆ ವರದಿಯನ್ನ ತರಿಸಿಕೊಳ್ಳುತ್ತೆ. ಅದಕ್ಕಾಗಿಯೇ ಒಂದು ತಂಡವೇ ಇದೆ. ನಾವೂ ವರದಿಯನ್ನ ಕಳಿಸುತ್ತೇವೆ. ವರದಿ ತಯಾರಿಸಲು ರಿಸರ್ಚ್ ತಂಡವೇ ಇದೆ. ಏನೆಲ್ಲಾ ಆಗುತ್ತೆ ಎಂಬುದರ ವರದಿಯನ್ನ ರಿಸರ್ಚ್ ತಂಡ ತಲುಪಿಸುತ್ತೆ ಎಂದು ತಿಳಿಸಿದರು.
ಕೆ.ಸಿ.ವೇಣುಗೋಪಾಲ ಬೆಂಗಳೂರಿಗೆ ಬರೋ ವಿಚಾರವಾಗಿ ಮಾತನಾಡಿ, ನನಗೆ ಯಾವ ವಿಚಾರವೂ ಗೊತ್ತಿಲ್ಲ, ಮಾಹಿತಿ ಇಲ್ಲ. ಸದ್ಯಕ್ಕೆ ದೆಹಲಿಗೆ ಹೋಗುವ ಅವಶ್ಯಕತೆ ಬಂದಿಲ್ಲ, ಹೋಗಲ್ಲ ಎಂದು ದೆಹಲಿ ಭೇಟಿ ಬಗ್ಗೆ ಸ್ಪಷ್ಟನೆ ನೀಡಿದರು.