ಬೆಂಗಳೂರು: ಪುನಾರಚನೆಗೆ ಸದ್ಯಕ್ಕೆ ಕಾಲ ಕೂಡಿ ಬಂದಂತೆ ಕಾಣ್ತಿಲ್ಲ.ಈಗ ಆಗುತ್ತೆ ಆಗ ಆಗುತ್ತೆ ಅನ್ನೋ ಚರ್ಚೆಗಳಿಗೆ ಹೈಕಮಾಂಡ್ ಬ್ರೇಕ್ ಹಾಕಿದೆ.ಸರ್ಕಾರ ಎರಡು ವರ್ಷ ಪೂರ್ಣವಾಗಲಿ ತದನಂತ್ರ ಇದ್ರ ಬಗ್ಗೆ ಬೇಕಾದ್ರೆ ನೋಡೋಣ ಎಂಬ ನಿರ್ಧಾರಕ್ಕೆ ಬಂದಿದೆಯಂತೆ.ಇಂದು ಸಿಎಂ ಖರ್ಗೆ ಭೇಟಿ ಮಾಡಿದ ವೇಳೆ ಎಐಸಿಸಿ ಅಧ್ಯಕ್ಷರೇ ಇದನ್ನ ಸ್ಪಷ್ಟಪಡಿಸಿದ್ದಾರಂತೆ.
ರಾಜ್ಯ ಸಚಿವ ಸಂಪುಟ ಪುನಾರಚನೆ ಚರ್ಚೆಗಳಿಗೆ ಕಾಂಗ್ರೆಸ್ ಹೈಕಮಾಂಡ್ ಮೊಳೆಹೊಡೆದಿದೆ.ಇನ್ನೇನು ಶೀಘ್ರದಲ್ಲೆ ಸಿದ್ದರಾಮಯ್ಯ ಸಂಪುಟ ಪುನಾರಚನೆಯಾಗುತ್ತೆ,ಏಳೆಂಟು ಸಚಿವರನ್ನ ಕೈಬಿಟ್ಟು ಹೊಸಬರಿಗೆ ಅವಕಾಶ ಮಾಡಿಕೊಡಲಾಗುತ್ತೆ ಎಂಬ ಚರ್ಚೆಗಳು ನಡೆದಿದ್ವು.ದೆಹಲಿಗೆ ಭೇಟಿ ನೀಡಿರುವ ಸಿಎಂ ಸಿದ್ದರಾಮಯ್ಯ,ಡಿಸಿಎಂ ಡಿಕೆಶಿ ವರಿಷ್ಠರ ಜೊತೆ ಈ ಬಗ್ಗೆ ಚರ್ಚೆ ನಡೆಸಲಿದ್ದು,ಒಪ್ಪಿಗೆ ಪಡೆಯಲಿದ್ದಾರೆಂಬ ಮಾತುಗಳಿದ್ವು.ಸಿಎಂ ಸಿದ್ದರಾಮಯ್ಯ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,ರಾಹುಲ್ ಗಾಂಧಿಯವರನ್ನ ಭೇಟಿ ಮಾಡಿದ್ರು.
ಚಿಕನ್ ಪ್ರಿಯರೇ ಗಮನಿಸಿ.. ಯಾವುದೇ ಕಾರಣಕ್ಕೂ ಕೋಳಿ ಮಾಂಸದ ಈ ಭಾಗವನ್ನು ತಿನ್ನಲೇಬೇಡಿ!
ಸಂಪುಟ ಪುನಾರಚನೆಯ ಬಗ್ಗೆ ಪ್ರಸ್ತಾಪವಿಟ್ಟಿದ್ದರು.ಆದ್ರೆ, ಹೈಕಮಾಂಡ್ ಪ್ರಸ್ತುತ ರಾಜ್ಯದ ಮೂರು ಚುನಾವಣೆಗಳಲ್ಲಿ ಗೆದ್ದಿದ್ದೇವೆ,ಪಕ್ಷ ಮತ್ತಷ್ಟು ಸದೃಡವಾಗಿದೆ.ಇಂತಹ ಸಂದರ್ಭದಲ್ಲಿ ಜೇನುಗೂಡಿಗೆ ಕೈಹಾಕೋದು ಬೇಡ.ಮೊದಲು ಸರ್ಕಾರಕ್ಕೆ ಎರಡು ವರ್ಷ ಪೂರ್ಣಗೊಳ್ಳಲಿ .ಆನಂತರದಲ್ಲಿ ಬೇಕಾದ್ರೆ ಅದ್ರ ಬಗ್ಗೆ ಯೋಚಿಸೋಣ ಎಂದು ಸಿಎಂಗೆ ಸ್ಪಷ್ಟಪಡಿಸಿದೆ.ಅಲ್ಲಿಗೆ ಸಂಪುಟ ಪುನಾರಚನೆಯ ಚರ್ಚೆ ಮುಂದಕ್ಕೆಹೋಗಿದೆ ಎನ್ನಲಾಗಿದೆ.ಇನ್ನು ಸಂಪುಟ ಪುನಾರಚನೆಯಾಗಲಿದೆ,ಕೆಲವರನ್ನ ಕೈಬಿಡ್ತಾರೆ.ಆಗ ನಮಗೂ ಅವಕಾಶ ಸಿಗಬಹುದು ಅಂತ ಕೆಲವು ಹಿರಿಯ ಶಾಸಕರು ಕನಸು ಕಂಡಿದ್ದರು.
ಯಾವಾಗ ಮಾಧ್ಯಮಗಳಲ್ಲಿ ಈ ಬಗ್ಗೆ ನಿರಂತರ ವರದಿ ಮುಂದುವರಿದ್ವೋ ಆಗಲೇ ಸೂಟುಬೂಟ ಹೊಲೆಸಿಕೊಂಡು ರೆಡಿಯಾಗಿದ್ರು.ಇನ್ನೇನು ನಮಗೆ ಅವಕಾಶ ಸಿಗಬಹುದು ಅಂತ ಕೆಲವರು ದೆಹಲಿಗೂ ತೆರಳಿದ್ದರು.ವರಿಷ್ಠರನ್ನ ಭೇಟಿ ಮಾಡಿ ಡಿಮ್ಯಾಂಡ್ ಇಟ್ಟಿದ್ದರು.ಇನ್ನುಕೆಲವರು ಸಿಎಂ,ಡಿಸಿಎಂ ಮೇಲೆ ಪ್ರೆಸರ್ ಕ್ರಿಯೇಟ್ ಮಾಡಿ ಹೈಕಮಾಂಡ್ ಮೇಲೆ ಒತ್ತಡ ಹಾಕಿದ್ದರು.ಆದ್ರೆ, ಇವತ್ತು ಸಿಎಂಗೆ ಖರ್ಗೆಯವರು ಕೊಟ್ಟ ಸಂದೇಶ ಆಕಾಂಕ್ಷಿಗಳಿಗೆ ತಣ್ಣೀರು ಎರಚಿದಂತಾಗಿದೆ.ಹೊಸ ಸೂಟು ಬೂಟುಗಳನ್ನಗೂಟಕ್ಕೆ ನೇತು ಹಾಕುವಂತಾಗಿದೆ.ಖಾಲಿ ಇರುವ ಒಂದು ಸ್ಥಾನ ಮಾತ್ರ ತುಂಬುವ ಬಗ್ಗೆ ತೀರ್ಮಾನ ಆಗಿದೆ ಎನ್ನಲಾಗಿದೆ