ಪ್ರವಾಹ ಎದುರಾಗುವ ಭೀತಿಗೆ ನದಿ ದಡದಲ್ಲಿರುವ ಪಂಪ್ಸೆಟ್ಗಳನ್ನು ರೈತರು ತೆಗೆದಿಟ್ಟಿದ್ದಾರೆ. ಖಾನಾಪೂರ ತಾಲೂಕಿನ ಜಾಂಬೋಟಿ ಬಳಿ ಕಸಮಳಿ ಬ್ರಿಡ್ಜ್ ಮೇಲೆ ಭಾರೀ ವಾಹನ ಸಂಚಾರ ನಿಷೇಧಿಸಲಾಗಿದೆ. ಪರಿಣಾಮ ಬೆಳಗಾವಿ – ಗೋವಾ ಸರಕು ಸಾಗಣೆಯ ಮೇಲೆ ಭಾರೀ ಪರಿಣಾಮ ಬೀರಿದೆ. ಗೋವಾದಿಂದ ಬರುವ ಎಲ್ಲಾ ವಾಹನಗಳನ್ನು ತಡೆ ಹಿಡಿಯಲಾಗಿದೆ. ಕಿತ್ತೂರಿನ ಹುಣಶೀಕಟ್ಟಿಯ ಮಲಪ್ರಭಾ ನದಿಯಲ್ಲಿ ರೈತರ ಸಮಸ್ಯೆ ಹಿನ್ನೆಲೆಯಲ್ಲಿ ಡಿ.ಸಿ ಮೊಹಮ್ಮದ್ ರೋಷನ್ ಭೇಟಿ ನೀಡಿದರು. ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಲು ಸರ್ಕಾರಕ್ಕೆ ಮನವಿ ಕಳುಹಿಸುವ ಭರವಸೆ ನೀಡಿದರು.
ಖಾಲಿ ಹೊಟ್ಟೆಗೆ ನಿಂಬೆ ಹಾಕಿ ಕುದಿಸಿದ ನೀರು ಕುಡಿಯುವುದರಿಂದ ಸಿಗುವ ಪ್ರಯೋಜಗಳೇನು ಗೊತ್ತಾ..?
ನಿಪ್ಪಾಣಿ ನಗರದ ಜತ್ರಾಟ್ವೇಸ್ನಲ್ಲಿ ಗೋಡೆ ಕುಸಿದು 45 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಯಾದಗಿರಿಯ ನಾರಾಯಣಪುರ ಜಲಾಶಯ 33 ಟಿಎಂಸಿ ಸಾಮರ್ಥ್ಯದ ಪೈಕಿ 28 ಟಿಎಂಸಿ ನೀರು ಸಂಗ್ರಹವಾಗಿದೆ. ಡ್ಯಾಮ್ನಿಂದ ಕೃಷ್ಣಾ ನದಿಗೆ 1.60 ಲಕ್ಷ ಕ್ಯೂಸೆಕ್ ನೀರು ರಿಲೀಸ್ ಮಾಡಲಾಗಿದೆ. ಸುರಪುರದ ನೀಲಕಂಠರಾಯನ ಗಡ್ಡಿ, ಮೇಲಿನ ಗಡ್ಡಿ, ಜಂಗಣ್ಣದೊಡ್ಡಿ ಮುಳುಗಡೆಯಾಗುವ ಸಾಧ್ಯತೆ ಇದ್ದು, ಹೈಅಲರ್ಟ್ ಘೋಷಿಸಲಾಗಿದೆ. ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಶೀಲಹಳ್ಳಿ ಸೇತುವೆ, ಹೂವಿನಹೆಡಗಿ ಸೇತುವೆಗಳಿಗೆ ಮುಳುಗಡೆ ಭೀತಿ ಎದುರಾಗಿದೆ.