‘ಲಿಯೋ’ (Leo Film) ಸಿನಿಮಾ ನಿರ್ಮಾಪಕರು ಇದೀಗ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಲೇಡಿ ಸೂಪರ್ ಸ್ಟಾರ್ ನಯನತಾರಾ ಪತಿ ವಿಘ್ನೇಶ್ ಶಿವನ್ ಜೊತೆ ‘ಲಿಯೋ’ ಟೀಮ್ ಕೈಜೋಡಿಸಿದೆ. ತಮಿಳಿನ ಈ ಸಿನಿಮಾಗೆ ಕನ್ನಡದ ನಟಿಗೆ ಹೀರೋಯಿನ್ ಆಗಿದ್ದಾರೆ.
ಸಾಲು ಸಾಲು ಫ್ಲಾಪ್ ನಂತರ ಕರಾವಳಿ ನಟಿ ಕೃತಿ ಶೆಟ್ಟಿ (Krithi Shetty) ಅವರು ತಮಿಳು ಚಿತ್ರರಂಗದತ್ತ ಮುಖ ಮಾಡಿದ್ದಾರೆ. ವಿಘ್ನೇಶ್ ಶಿವನ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಕೃತಿ ಶೆಟ್ಟಿ ನಾಯಕಿಯಾಗಿ ಫೈನಲ್ ಆಗಿದ್ದಾರೆ. ಒಂದು ವಿಭಿನ್ನ ಪ್ರೇಮಕಥೆಗೆ ನಟಿ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಈ ಚಿತ್ರದ ಮುಹೂರ್ತ ಸಮಾರಂಭ ಇಂದು (ಡಿ.15) ನೆರೆವೇರಿದ್ದು, ಹೀರೋ ಆಗಿ ‘ಲವ್ ಟುಡೇ’ ನಟ ಪ್ರದೀಪ್ (Pradeep) ಆಯ್ಕೆ ಆಗಿದ್ದಾರೆ. ಈ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್ ಸಂಗೀತ ನೀಡಲಿದ್ದಾರೆ