ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯಲ್ಲಿ ಯುಪಿ ಯೋಧಾಸ್ ಎದುರು 33-34 ಅಂತರದಿಂದ ವೀರೋಚಿತ ಸೋಲು ಅನುಭವಿಸಿದೆ. ಈ ಮೂಲಕ ಯುಪಿ ಯೋಧಾಸ್ ತವರಿನಲ್ಲಿ ಶುಭಾರಂಭ ಕಂಡಿದೆ.
ಮೊದಲಾರ್ಧದ 19 ನಿಮಿಷದವರೆಗೂ ಉಭಯ ತಂಡಗಳು ಸಮಬಲದ ಹೋರಾಟ ಪ್ರದರ್ಶಿಸಿದವು. ಅಂತಿಮ ನಿಮಿಷದಲ್ಲಿ ಪ್ರದೀಪ್ ನರ್ವಾಲ್ಗೆ 2 ಅಂಕ ನೀಡಿದ ಬುಲ್ಸ್ ಆಲೌಟ್ ಭೀತಿ ಎದುರಿಸಿತು. ಮೊದಲಾರ್ಧದಲ್ಲಿ ಬುಲ್ಸ್ 13-15ರಿಂದ ಹಿನ್ನಡೆ ಕಂಡಿತು. ದ್ವಿತಿಯಾರ್ಧದಲ್ಲಿ 2 ಬಾರಿ ಆಲೌಟ್ ಆಗುವ ಮೂಲಕ ಬುಲ್ಸ್ ಸೋಲಿನತ್ತ ಸಾಗಿತು. ಅಂತಿಮ ನಿಮಿಷದಲ್ಲಿ ಬುಲ್ಸ್ ತಿರುಗೇಟು ನೀಡಿದರೂ ಸೋಲಿನಿಂದ ಪಾರಾಗಲಿಲ್ಲ. ಬುಲ್ಸ್ ಪರ ಭರತ್, ಸುಶೀಲ್ ತಲಾ 8 ಅಂಕ ಕಲೆಹಾಕಿದರು.