ಬಿಗ್ ಬಾಸ್ ಸ್ಪರ್ಧಿ ಹಾಗೂ ಬುಲೆಟ್ ಪ್ರಕಾಶ್ ಅವರ ಪುತ್ರ ರಕ್ಷಕ್ ಬುಲೆಟ್ ಅವರು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಚಿತ್ರಕ್ಕೆ ಸದ್ಯ ‘RB 01’ ಎಂದು ಟೈಟಲ್ ಇಡಲಾಗಿದೆ.
ಶೀಘ್ರವೇ ಸಿನಿಮಾದ ಶೀರ್ಷಿಕೆ ಹಾಗೂ ಟೀಸರ್ ಅನಾವರಣ ಮಾಡುವುದಾಗಿ ರಕ್ಷಕ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಟೈಟಲ್ನಲ್ಲಿ ಲಾಂಗ್ ಕಾಣಿಸಿದೆ. ಹೀಗಾಗಿ, ಇದೊಂದು ರೌಡಿಸಂ ಕಥೆ ಇರಬಹುದು ಎಂದು ಅವರ ಫ್ಯಾನ್ಸ್ ಊಹಿಸುತ್ತಿದ್ದಾರೆ. ಗಣಪತಿ ವಿಸರ್ಜನೆಯ ದೃಶ್ಯವೂ ಇದೆ. ಈ ಎಲ್ಲಾ ಕಾರಣದಿಂದ ಸಿನಿಮಾದ ಪೋಸ್ಟರ್ ಕುತೂಹಲ ಮೂಡಿಸಿದೆ. ‘ಮಚ್ಚಾ ಏರಿಯಾದಲ್ಲಿ ಕಣ್ಮುಂದೆ ಬೇಜ್ಜಾನ್ ಗಾಡಿಗಳು ಸೌಂಡು ಮಾಡುತ್ತವೆ. ಆದರೆ ಸೌಂಡ್ ಕೇಳ್ತಿದ್ದ ಹಾಗೆ ಇದೇ ಗಾಡಿ ಅಂತ ಹೇಳೋಕೆ ಆಗೋದು ಒಂದನ್ನೇ ಅದುವೇ ಬುಲೆಟ್. ಇನ್ಮುಂದೆ ನಂದೇ ರೌಂಡು, ನಂದೇ ಸೌಂಡು’ ಎಂದು ಬರೆಯಲಾಗಿದೆ.
ಪೋಸ್ಟರ್ ಹಂಚಿಕೊಂಡು ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ ರಕ್ಷಕ್. ‘ಎಲ್ಲಾ ನನ್ನ ಆತ್ಮೀಯರೇ, ಇಂದು ನನ್ನ ಪೂಜ್ಯ ತಂದೆ ದಿವಂಗತ ಬುಲೆಟ್ ಪ್ರಕಾಶ್ ಅವರ 47ನೇ ಜನ್ಮದಿನ. ಇಂದಿನ ವಿಶೇಷವೇನೆಂದರೆ, ನಾನು ನಾಯಕ ನಟನಾಗಿ ನಟಿಸುತ್ತಿರುವ ನನ್ನ ಚೊಚ್ಚಲ ಚಿತ್ರದ ಪೋಸ್ಟರ್ ಬಿಡುಗಡೆ ಮಾಡುತ್ತಿದ್ದೇನೆ. ಇದು ನಿಜಕ್ಕೂ ನನಗೆ ಸಂತಸ ತಂದಿದೆ. ನನ್ನ ತಂದೆಯ ಆಶೀರ್ವಾದದೊಂದಿಗೆ ನಿಮ್ಮೆಲ್ಲರ ಆಶೀರ್ವಾದ ಕೂಡ ಸದಾ ನನ್ನ ಮೇಲಿರಲಿ ಎಂದು ಬಯಸುತ್ತೇನೆ ಎಂದಿದ್ದಾರೆ.