ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಬಿಇಎಲ್ ಸಂಸ್ಥೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
Whatsapp ನಲ್ಲಿ ಬಂದ Voice message ಅನ್ನು ಅಕ್ಷರ ರೂಪಕ್ಕೆ ಬದಲಾಯಿಸುವುದು ಹೇಗೆ ಗೊತ್ತಾ..?
ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. 300ಕ್ಕೂ ಅಧಿಕ ಉದ್ಯೋಗಗಳಿದ್ದು ವಿಜ್ಞಾನ ವಿಭಾಗದಲ್ಲಿ ಪದವಿ ಪಡೆದಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶ ಆಗಿದೆ. ಅಲ್ಲದೇ ಬಿಇಎಲ್ ಸಂಸ್ಥೆಯು ಪ್ರತಿಷ್ಠಿತಿ ಸಂಸ್ಥೆಯಾಗಿದ್ದು ಆಯ್ಕೆಯಾದ ಅಭ್ಯರ್ಥಿಗಳಿಗೆ ಎಲ್ಲ ಸರ್ಕಾರಿ ಸೌಕರ್ಯಗಳು ಸರಿಯಾದ ಸಮಯಕ್ಕೆ ಲಭ್ಯ ಆಗುತ್ತವೆ
ಉದ್ಯೋಗ ಆಕಾಂಕ್ಷಿಗಳ ಅರ್ಹತೆ, ಖಾಲಿ ಹುದ್ದೆಗಳೆಷ್ಟು, ಆಯ್ಕೆ ಪ್ರಕ್ರಿಯೆ ಹೇಗಿದೆ, ಪರೀಕ್ಷೆಯ ಮಾದರಿ ಮತ್ತು ಇತರ ವಿವರ ಇಲ್ಲಿ ನೀಡಲಾಗಿದೆ. ಉದ್ಯೋಗಗಳ ವರ್ಗೀಕರಣ- ಸಾಮಾನ್ಯ (ಯುಆರ್) 143, ಇಡಬ್ಲುಎಸ್ 35, ಒಬಿಸಿ 94, ಎಸ್ಸಿ 52 ಹಾಗೂ ಎಸ್ಟಿ 26 ಉದ್ಯೋಗಗಳು ಇವೆ.
ಉದ್ಯೋಗದ ಹೆಸರು- ಪ್ರೊಬೇಷನರಿ ಇಂಜಿನಿಯರ್ ಹುದ್ದೆ
ಪ್ರೊಬೇಷನರಿ ಇಂಜಿನಿಯರ್ (ಎಲೆಕ್ಟ್ರಾನಿಕ್ಸ್)- 200 ಉದ್ಯೋಗ
ಪ್ರೊಬೇಷನರಿ ಇಂಜಿನಿಯರ್ (ಮೆಕನಿಕಲ್)- 150 ಉದ್ಯೋಗ
ಆಯ್ಕೆ ಪ್ರಕ್ರಿಯೆ- ಕಂಪ್ಯೂಟರ್ ಬೇಸ್ ಟೆಸ್ಟ್, ಸಂದರ್ಶನ, ವೈದ್ಯಕೀಯ ಪರೀಕ್ಷೆ
ಮಾಸಿಕ ವೇತನ- 40,000 ದಿಂದ 1,40,000 ರೂಪಾಯಿಗಳು
ಶೈಕ್ಷಣಿಕ ಅರ್ಹತೆ
ಬಿಇ, ಬಿಟೆಕ್, ಬಿಎಸ್ಸಿ, (ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್, ಮೆಕನಿಕಲ್)
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ- 31 ಜನವರಿ 2025
ಸಂಸ್ಥೆಯು ಪರೀಕ್ಷೆ ನಡೆಸುವ ತಿಂಗಳು- ಮಾರ್ಚ್ 2025