ಚಳಿಗಾಲದಲ್ಲಿ ವಾತಾವರಣದಲ್ಲಿ ತಂಪು ಗಾಳಿ ಇರುವುದರಿಂದ ಇದು ದೇಹದ ತೇವಾಂಶವನ್ನು ಹೀರಿಕೊಳ್ಳುತ್ತದೆ. ಇದರಿಂದ ಚರ್ಮ ಒಣಗಿ ಒರಟಾಗಿ ಬಿರುಕು ಬಿಡುತ್ತದೆ. ಚಳಿಗಾಲದಲ್ಲಿ ಹೆಚ್ಚಿನ ಜನರಲ್ಲಿ ಒಡೆದ ಹಿಮ್ಮಡಿ ಸಮಸ್ಯೆ ಕಾಡುತ್ತದೆ.
ಆಲೂಗಡ್ಡೆಯಲ್ಲಿ ಅನೇಕ ಪೋಷಕಾಂಶಗಳು, ವಿಟಮಿನ್ ಗಳಿವೆ. ಇದನ್ನು ಅಡುಗೆಯಲ್ಲಿ ಬಳಸುತ್ತಾರೆ. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಅಲ್ಲದೇ ಇದು ಚರ್ಮದ ಸಮಸ್ಯೆಗಳನ್ನು ನಿವಾರಿಸುತ್ತದೆ. ಈ ಆಲೂಗಡ್ಡೆಯನ್ನು ಬಳಸಿ ನಮ್ಮ ಹಿಮ್ಮಡಿ ಬಿರುಕುಗಳನ್ನು ನಿವಾರಿಸಬಹುದಂತೆ.
ಹಾಗಾಗಿ ಆಲೂಗಡ್ಡೆಯನ್ನು ತುರಿದು ಅದರಿಂದ ರಸವನ್ನು ತೆಗೆಯಿರಿ. ಇದಕ್ಕೆ ಟೂತ್ ಪೇಸ್ಟ್ ಸ್ವಲ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದಕ್ಕೆ ನಿಂಬೆ ಹಣ್ಣಿನ ರಸ ಮತ್ತು ಪುಡಿ ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಪಾದಗಳನ್ನು ಚೆನ್ನಾಗಿ ಬಿಸಿ ನೀರಿನಿಂದ ತೊಳೆದು ನಂತರ ನಿಂಬೆ ಹಣ್ಣಿನ ಸಿಪ್ಪೆಯಿಂದ ಈ ಮಿಕ್ಸ್ ಮಾಡಿದ ಪೇಸ್ಟ್ ಅನ್ನು ಪಾದಗಳಿಗೆ ಹಚ್ಚಿ 5 ನಿಮಿಷ ಮಸಾಜ್ ಮಾಡಿ ನಂತರ 10 ನಿಮಿಷ ಹಾಗೇ ಬಿಟ್ಟು ಬಿಸಿ ನೀರಿನಿಂದ ತೊಳೆಯಿರಿ. ಇದನ್ನು ರಾತ್ರಿ ಮಲಗುವ ಮುನ್ನ ಮಾಡಿದರೆ ತುಂಬಾ ಒಳ್ಳೆಯದು.