2023ರ ವರ್ಷ ಅಂತ್ಯದಲ್ಲಿದೆ. ಪ್ರಸಕ್ತ ವರ್ಷದಲ್ಲಿ ಟೆಸ್ಟ್, ಟಿ20 ಹಾಗೂ ಒಡಿಐ ಕ್ರಿಕೆಟ್ನಲ್ಲಿ ಕೆಲ ಅತ್ಯುತ್ತಮ ಪ್ರದರ್ಶನಗಳನ್ನು ನಾವು ಕಣ್ತುಂಬಿಸಿಕೊಂಡಿದ್ದೇವೆ. ಇದರಲ್ಲಿ ಇತ್ತೀಚೆಗೆ ಮುಕ್ತಾಯವಾಗಿದ್ದ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಾಗಿದೆ. ಈ ಟೂರ್ನಿಯ ಫೈನಲ್ನಲ್ಲಿ ಭಾರತ ತಂಡವನ್ನು ಮಣಿಸಿ ಆಸ್ಟ್ರೇಲಿಯಾ ತಂಡ ಏಕದಿನ ವಿಶ್ವಕಪ್ ಮುಡಿಗೇರಿಸಿಕೊಂಡಿತ್ತು. ಆ ಮೂಲಕ ಸತತ 10 ಪಂದ್ಯಗಳಲ್ಲಿ ಗೆದ್ದಿದ್ದ ಭಾರತ ತಂಡಕ್ಕೆ ಫೈನಲ್ ಸೋಲು ವಿಶ್ವಕಪ್ ಗೆಲ್ಲುವ ಕನಸುನ್ನು ಭಗ್ನಗೊಳಿಸಿತು.
ಇದೀಗ 2023ರ ವರ್ಷ ಮುಗಿಯಲು ಇನ್ನು ಕೇವಲ ಎರಡು ವಾರಗಳು ಮಾತ್ರ ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದಲ್ಲಿ 50 ಓವರ್ಗಳ ಸ್ವರೂಪದಲ್ಲಿ ಯಾವ ಬ್ಯಾಟ್ಸ್ಮನ್ ಅತಿ ಹೆಚ್ಚು ಸಿಕ್ಸರ್ಗಳನ್ನು ಸಿಡಿಸಿದ್ದಾರೆ ಎಂಬ ಬಗ್ಗೆ ಇದೀಗ ತಿಳಿಸಿಕೊಳ್ಳೋಣ. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಈ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ. ಇನ್ನು ಭಾರತದ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ 10ನೇ ಸ್ಥಾನವನ್ನು ಅಲಂಕರಿಸಿದ್ದಾರೆ.
1. ರೋಹಿತ್ ಶರ್ಮಾ
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ 2023ರಲ್ಲಿ 27 ಏಕದಿನ ಪಂದ್ಯಗಳನ್ನು ಆಡಿದ್ದಾರೆ ಹಾಗೂ ಎರಡು ಶತಕಗಳು ಹಾಗೂ 9 ಅರ್ಧಶತಕಗಳೊಂದಿಗೆ 1255 ರನ್ಗಳನ್ನು ಗಳಿಸಿದ್ದಾರೆ
2. ಮುಹಮ್ಮದ್ ವಸೀಮ್
ಯುಎಇ ತಂಡದ ಮುಹಮ್ಮದ್ ವಸೀಮ್ ಅವರು ಈ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದ್ದಾರೆ.
3. ಹೆನ್ರಿಚ್ ಕ್ಲಾಸೆನ್
ದಕ್ಷಿಣ ಆಫ್ರಿಕಾ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಹೆನ್ರಿಚ್ ಕ್ಲಾಸೆನ್ ಅವರು 21 ಒಡಿಐ ಪಂದ್ಯಗಳಿಂದ 50ರ ಸರಾಸರಿಯಲ್ಲಿ 900 ರನ್ಗಳನ್ನು ಗಳಿಸಿದ್ದಾರೆ
4. ಮಿಚೆಲ್ ಮಾರ್ಷ್
ಆಸ್ಟ್ರೇಲಿಯಾ ತಂಡದ ಆಲ್ರೌಂಡರ್ ಮಿಚೆಲ್ ಮಾರ್ಷ್ ಅವರು ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಅಲಂಕರಿಸಿದ್ದಾರೆ.
5. ಶುಭಮನ್ ಗಿಲ್
ಭಾರತ ತಂಡದ ಯಂಗ್ ಓಪನರ್ ಶುಭಮನ್ ಗಿಲ್ 2023ರ ವರ್ಷದಲ್ಲಿ ದಾಖಲೆಯ ರನ್ಗಳನ್ನು ಮೂರೂ ಸ್ವರೂಪದಲ್ಲಿ ಗಳಿಸಿದ್ದಾರೆ
6. ಡೇವಿಡ್ ಮಿಲ್ಲರ್
ದಕ್ಷಿಣ ಆಫ್ರಿಕಾ ತಂಡದ ಡೇವಿಡ್ ಮಿಲ್ಲರ್ ಅವರು ಕೂಡ ಈ ಪಟ್ಟಿಯಲ್ಲಿ ಆರನೇ ಸ್ಥಾನವನ್ನು ಅಲಂಕರಿಸಿದ್ದಾರೆ.
7. ಡೇವಿಡ್ ವಾರ್ನರ್
ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಅವರು 2023ರಲ್ಲಿ 21 ಒಡಿಐ ಪಂದ್ಯಗಳಿಂದ 925 ರನ್ಗಳನ್ನು ಗಳಿಸಿದ್ದಾರೆ
8. ಆಸೀಫ್ ಖಾನ್
ಯುಎಇ ತಂಡದ ಆಸೀಫ್ ಖಾನ್ ಅವರು ಈ ವರ್ಷ ಅತಿ ಹೆಚ್ಚು ಒಡಿಐ ಸಿಕ್ಸರ್ಗಳನ್ನು ಬಾರಿಸಿದ ಬ್ಯಾಟ್ಸ್ಮನ್ಗಳ ಸಾಲಿನಲ್ಲಿ ಎಂಟನೇ ಸ್ಥಾನವನ್ನು ಅಲಂಕರಿಸಿದ್ದಾರೆ.
9. ಡ್ಯಾರಿಲ್ ಮಿಚೆಲ್
ನ್ಯೂಜಿಲೆಂಡ್ ಬ್ಯಾಟರ್ ಡ್ಯಾರಿಲ್ ಮಿಚೆಲ್ ಕೂಡ ಈ ಪಟ್ಟಿಯಲ್ಲಿ 9ನೇ ಸ್ಥಾನವನ್ನು ಅಲಂಕರಿಸಿದ್ದಾರೆ.
10. ಶ್ರೇಯಸ್ ಅಯ್ಯರ್
ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಅವರು ಈ ಪಟ್ಟಿಯಲ್ಲಿ 10ನೇ ಸ್ಥಾನವನ್ನು ಅಲಂಕರಿಸಿದ್ದಾರೆ.