2023ರಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿಯೂ ಹಲವು ಮಹತ್ವದ ಸರಣಿಗಳು ನಡೆದಿದ್ದು. ಜೂನ್ನಲ್ಲಿ ನಡೆದಿದ್ದ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ ಕಾಂಗರೂ ಪಡೆಯ ಬೌಲರ್ಗಳು ತಮ್ಮ ಬೌಲಿಂಗ್ ಸಾಮರ್ಥ್ಯದಿಂದಲೇ ತಮ್ಮ ತಂಡಕ್ಕೆ ಚಾಂಪಿಯನ್ ಪಟ್ಟವನ್ನು ತಂದುಕೊಟ್ಟಿದ್ದರು.
ಬಾರ್ಡರ್- ಗವಾಸ್ಕರ್ ಹಾಗೂ ಆಷಸ್ ಟೆಸ್ಟ್ ಸರಣಿಯಲ್ಲೂ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ್ದ ಈ ತಂಡದ ಹಿರಿಯ ಸ್ಪಿನ್ನರ್ ನೇಥನ್ ಲಯಾನ್ 2023ರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದಾರೆ.
1. ನೇಥನ್ ಲಯಾನ್ (ಆಸ್ಟ್ರೇಲಿಯಾ)
ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 500 ವಿಕೆಟ್ ಸಾಧನೆ ಮಾಡಿರುವ ಆಸ್ಟ್ರೇಲಿಯಾದ ಸ್ಪಿನ್ನರ್ ನೇಥನ್ ಲಯಾನ್ ಹೆಚ್ಚು ತಿರುವು, ಬೌನ್ಸ್ ಹಾಗೂ ಸಮತಟ್ಟಾದ ಪಿಚ್ಗಳಲ್ಲೂ ಬ್ಯಾಟರ್ಗಳನ್ನು ಕಂಗಾಲಾಗಿಸುವ ಕಲೆ ಹೊಂದಿದ್ದಾರೆ.
2. ರವಿಚಂದ್ರನ್ ಅಶ್ವಿನ್ (ಭಾರತ)
ಎದುರಾಳಿ ಬ್ಯಾಟರ್ಗಳ ಮನಸ್ಥಿತಿ ಹಾಗೂ ಪಿಚ್ಗಳ ಗುಣವನ್ನು ಅರಿತು ಬೌಲಿಂಗ್ ಮಾಡುವ ಟೆಸ್ಟ್ ಸ್ವರೂಪದ ನಂಬರ್ 1 ಬೌಲರ್ ರವಿಚಂದ್ರನ್ ಅಶ್ವಿನ್
3. ಸ್ಟುವರ್ಟ್ ಬ್ರಾಡ್ (ಇಂಗ್ಲೆಂಡ್)
2023ರಲ್ಲಿ ತಮ್ಮ ಸುದೀರ್ಘ ಕಾಲದ ಟೆಸ್ಟ್ ಜೀವನಕ್ಕೆ ಸ್ಟುವರ್ಟ್ ಬ್ರಾಡ್ ವಿದಾಯ ಹೇಳಿದ್ದಾರೆ. ಆದರೆ 2023ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪ್ರತಿಷ್ಠಿತ ಆಷಸ್ ಸರಣಿ ಸೇರಿದಂತೆ ಕೆಲವು ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ಗೆ ಗೆಲುವು ತಂದುಕೊಟ್ಟಿದ್ದಾರೆ.
4. ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ)
2023ರ ಪ್ರತಿಷ್ಠಿತ ಆಷಸ್ ಟೆಸ್ಟ್ ಸರಣಿಯಲ್ಲಿ 23 ವಿಕೆಟ್ ಪಡೆದು ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಗುರುತಿಸಿಕೊಂಡಿರುವ ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್
5. ರವೀಂದ್ರ ಜಡೇಜಾ (ಭಾರತ)
2023ರಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದವರ ಸಾಲಿನಲ್ಲಿ ರವೀಂದ್ರ ಜಡೇಜಾ 5ನೇ ಸ್ಥಾನದಲ್ಲಿದ್ದಾರೆ. ವಿಶ್ವದ ಯಾವುದೇ ಪಿಚ್ನಲ್ಲಿ ಉತ್ತಮ ಲೈನ್ ಆಂಡ್ ಲೆನ್ತ್ನಲ್ಲಿ ಬೌಲ್ ಮಾಡುವ ಜಡೇಜಾ!