ಬೆಂಗಳೂರು/ನವದೆಹಲಿ:-:- ಮಾರ್ಚ್ ತಿಂಗಳಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಶೈಕ್ಷಣಿಕ ವರ್ಷ ಪ್ರಾರಂಭವಾಗುವುದು ತಿಂಗಳುಗಳು ಬಾಕಿ ಇರುವಾಗಲೇ ಮಾರ್ಚ್ ನಲ್ಲಿ ಸಹ ಸಾರ್ವಜನಿಕ ರಜೆಗಳು ಎದುರಾಗಿವೆ. ಯಾವೆಲ್ಲ ಹಬ್ಬಗಳು ಎದುರಾಗಿವೆ? ಮಾರ್ಚ್ ತಿಂಗಳ ರಜೆ ದಿನದ ಪಟ್ಟಿ ಇಲ್ಲಿದೆ ನೋಡಿ.
ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನವೇ ಮಾರ್ಚ್ನಲ್ಲಿ ಶಾಲೆಗಳಿಗೆ ಕೆಲವು ರಜೆಗಳು ನಿಗದಿ ಆಗಿವೆ. ಈದ್-ಉಲ್-ಫಿತರ್, ಹೋಳಿ ಹಬ್ಬ (ಹೋಳಿಕಾ ದಹನ್), ಹಿಂದೂಗಳ ಪಾಲಿನ ಹೊಸ ವರ್ಷ ಯುಗಾದಿ ಹಬ್ಬ, ಗುಡಿ ಪಾಡ್ವಾ ಮತ್ತು ಚೈತ್ರ ಸುಖಾದಿ ಹಬ್ಬಗಳು ಸೇರಿವೆ. ಈ ಹಬ್ಬಗಳು ಮಾರ್ಚ್ನಲ್ಲಿ ಬರಲಿದ್ದು, ಆಯಾ ದಿವಸ ಶಾಲೆಗಳಿಗೆ ರಜೆ ಇರುತ್ತವೆ. ಪಟ್ಟಿ ಇಲ್ಲಿದೆ.
ಕರ್ನಾಟಕ ಸೇರಿದಂತೆ ಭಾರತದ ಅನೇಕ ರಾಜ್ಯಗಳಲ್ಲಿ ಹೋಳಿ ಹಬ್ಬವನ್ನು ಬಹು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅಂದು ದೀಪೋತ್ಸವ ಬೆಳಗಿಸಲಾಗುತ್ತದೆ. ಇದು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯ ಸಾಧಿಸುವಂ ಸಂಕೇತವಾಗಿದೆ. ಈ ಹಬ್ಬದ ಪ್ರಯುಕ್ತ ಎಲ್ಲ ರಾಜ್ಯಗಳು ಅಂದರೆ ಭಾರತಾದ್ಯಂತ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಇದು ಬಣ್ಣದೋಕುಳಿಯಲ್ಲಿ ಮುಳುಗಲಿರುವ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿಯಾಗಿದೆ.
ಕೆಲವೆಡೆ ಹೋಳಿ ಹಬ್ಬವನ್ನು ಮಾರ್ಚ್ 14ರಂದು ಆಚರಿಸುವ ಹಿನ್ನೆಲೆಯಲ್ಲಿ ಅಂದು ಕೆಲವು ರಾಜ್ಯಗಳ ಶಾಲೆ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಇಡಿ ಮನೆಯ ಕುಟುಂಬಸ್ಥರು ಅಂದು ಹಬ್ಬದಲ್ಲಿ ಪಾಲ್ಗೊಂಡಿರುತ್ತಾರೆ.
ಮಾರ್ಚ್ 30 ರಂದು ಯುಗಾದಿ ಹಬ್ಬ, ಗುಡಿ ಪಾಡ್ವಾ ಮತ್ತು ಚೈತ್ರ ಸುಖಲಾಡಿ ಹಬ್ಬಗಳು ಎದುರಾಗುತ್ತವೆ. ಈ ಹಬ್ಬಗಳು ಹೊಸ ವರ್ಷದ ಹಬ್ಬಗಳಾಗಿವೆ. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಆಚರಿಸಲಾಗುತ್ತದೆ. ಹೊಸ ವರ್ಷದ ಶುಭಾರಂಭಕ್ಕೆ ಈ ಹಬ್ಬಗಳು ಸಾಕ್ಷಿಯಾಗಲಿವೆ ಅಂತಲೇ ಹಿಂದೂಗಳು ಭಾವಿಸಿದ್ದಾರೆ. ಈ ಸಂಬಂಧ ಈ ರಾಜ್ಯಗಳ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಮುಸಲ್ಮಾನರ ಪವಿತ್ರ ಹಬ್ಬವಾಗಿರುವ ಈದ್-ಉಲ್-ಫಿತರ್ ರಂಜಾನ್ ಅನ್ನು ಭಾರತದಾದ್ಯಂತ ಅದ್ಧೂರಿಯಾಗಿ ಆಚರಿಸುತ್ತಾರೆ. ಅಂದು ಚಂದ್ರನ ದರ್ಶನದ ಆಧಾರದಲ್ಲಿ ಈ ಹಬ್ಬ ಆಚರಿಸಲಾಗುತ್ತದೆ. ಈ ಹಬ್ಬವನ್ನು ಎಲ್ಲ ರಾಜ್ಯಗಳಲ್ಲಿ ಆಚರಣೆ ಮಾಡುತ್ತಾರೆ. ಹೀಗಾಗಿ ರಾಷ್ಟ್ರವ್ಯಾಪಿ ಶಾಲೆಗಳಿಗೆ ರಜೆ ಘೋಷಣೆ ಆಗಿದೆ.
ಶಾಲೆ-ಬ್ಯಾಂಕ್ ರಜಾ ದಿನಗಳ ಪಟ್ಟಿ
ಹೋಳಿ ಹಬ್ಬ: ಮಾರ್ಚ್ 13
ಹೋಳಿ ಹಬ್ಬ: ಮಾರ್ಚ್ 14
ಗುಡಿ ಪಾಡ್ವಾ: ಮಾರ್ಚ್ 30
ರಂಜಾನ್ : ಮಾರ್ಚ್ 31
ಭಾನುವಾರ: ಮಾರ್ಚ್ 02
ಎರಡನೇ ಶನಿವಾರ: ಮಾರ್ಚ್ 08
ಭಾನುವಾರ : ಮಾರ್ಚ್ 09
ಭಾನುವಾರ : ಮಾರ್ಚ್ 16
ನಾಲ್ಕನೇ ಶನಿವಾರ : ಮಾರ್ಚ್ 22
ಭಾನುವಾರ : ಮಾರ್ಚ್ 23
ಭಾನುವಾರ : ಮಾರ್ಚ್ 30
05 ಶನಿವಾರ-05 ಭಾನುವಾರಗಳು, ಸರಣಿ ರಜೆಗಳು