ಬೆಂಗಳೂರು: 2023-24ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಇನ್ನು ಈ ಪರೀಕ್ಷೆ ಯಲ್ಲಿ ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ. ದಕ್ಷಿಣ ಕನ್ನಡ ಜಿಲ್ಲೆ ದ್ವಿತೀಯ ಸ್ಥಾನ ದೊರೆತಿದ್ದರೆ, ಯಾದಗಿರಿ ಜಿಲ್ಲೆಗೆ ಕೊನೆಯ ಸ್ಥಾನದಲ್ಲಿದೆ. ಉಡುಪಿ ಜಿಲ್ಲೆಯಲ್ಲಿ ಶೇ 94ರ ಫಲಿತಾಂಶ ದಾಖಲಾಗಿದೆ. ಸಾಮಾನ್ಯವಾಗಿ ಹೆಚ್ಚು ಅಂಕ ಪಡೆದವರು, ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು,
ಕಡಿಮೆ ಅಂಕ ಬಂದವರು ಕಲಾ ಮತ್ತು ವಾಣಿಜ್ಯ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ವಿಭಾಗಗಳನ್ನು ಹೊರತುಪಡಿಸಿ ವಿದ್ಯಾರ್ಥಿಗಳು ಡಿಪ್ಲೊಮ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಬಹುದು. ಈ ಡಿಪ್ಲೊಮ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಳ್ಳುವುದರಿಂದ ನಿಮಗೆ ಹೆಚ್ಚಿನ ಅನುಕೂಲಗಳಿವೆ.
ಡಿಪ್ಲೊಮಾ ಇನ್ ಆರ್ಟ್ ಟೀಚರ್
ಆರ್ಟ್ ಟೀಚರ್ ಡಿಪ್ಲೊಮಾ ಅಥವಾ ಡಿಪ್ಲೊಮಾ ಇನ್ ಆರ್ಟ್ ಟೀಚಿಂಗ್ ಎನ್ನುವುದು ಶಾರ್ಟ್ ಟೈಂ ಕೋರ್ಸ್ ಆಗಿದೆ. ಈ ಕೋರ್ಸ್ನಲ್ಲಿ ನಿಮಗೆ ಪೇಟಿಂಗ್, ಸ್ಕೆಚಿಂಗ್ ಬಗ್ಗೆ ಕಲಿಸಲಾಗುತ್ತದೆ. ಈ ಕೋರ್ಸ್ಗೆ ಪ್ರವೇಶ ಪಡೆಯಬೇಕಾದರೆ ವಿದ್ಯಾರ್ಥಿಯೂ 17 ವರ್ಷಕ್ಕಿಂತ ಮೇಲ್ಪಟ್ಟವರಿರಬೇಕು. ಇದು ಆರು ತಿಂಗಳ ಕೋರ್ಸ್ ಆಗಿದೆ. ಈ ಕೋರ್ಸ್ ಮುಗಿದ ನಂತರ ಆರ್ಟ್ ಟೀಚರ್ ಆಗಿ ಕೇಲಸ ಮಾಡಬಹುದು ಮತ್ತು ಸ್ವಯಂ ಉದ್ಯೋಗವನ್ನು ನಡೆಸಲು ಅವಕಾಶವಿದೆ.
ಡಿಪ್ಲೊಮ ಇನ್ ಫ್ಯಾಷನ್ ಡಿಸೈನಿಂಗ್
ಎಸ್ಎಸ್ಎಲ್ಸಿ ಮತ್ತು ಪಿಯುಸಿ ನಂತರ ಫ್ಯಾಶನ್ ಡಿಸೈನಿಂಗ್ ಕೋರ್ಸ್ನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇತ್ತಿಚೆಗೆ ಬಹಳಷ್ಟು ಯುವಕ, ಯುವತಿಯರು ಈ ಕೋರ್ಸ್ ಬಗ್ಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ಈಗಿನ ಟ್ರೆಂಡ್ಗೆ ಫ್ಯಾಷನ್ ಡಿಸೈನಿಂಗ್ ಕೋರ್ಸ್ ಹೆಚ್ಚು ಆಕರ್ಷಣಿಯವಾಗಿದೆ. ಈ ಕೋರ್ಸ್ ಮುಗಿದ ಮೇಲೆ ಹೆಚ್ಚು ಉದ್ಯೋಗಾವಕಶಗಳಿವೆ. ಖಚಿತ ಉದ್ಯೋಗದ ಭರಸವೆಯನ್ನು ಇದು ನೀಡುತ್ತದೆ.
ಡಿಪ್ಲೊಮ ಇನ್ ಇಂಜಿನಿಯರಿಂಗ್
ಬಹುತೇಕ ಎಲ್ಲಾ ವಿದ್ಯಾರ್ಥಿಗಳಿಗೆ ನಾನು ಇಂಜಿನಿಯರ್ ಆಗಬೇಕು ಎನ್ನುವ ಕನಸು ಇದ್ದೇ ಇರುತ್ತದೆ. ಇದಕ್ಕಾಗಿ ನೀವು ಪಿಯುಸಿಯಲ್ಲಿ ವಿಜ್ಞಾನ ವಿಷಯ ಓದಿ, ನಂತರ ಇಂಜಿನಿಯರಿಂಗ್ ಓದುವ ಅವಶ್ಯಕತೆಯಿಲ್ಲ. ಎಸ್ಎಸ್ಎಲ್ಸಿ ನಂತರ ಡಿಪ್ಲೊಮ ಇನ್ ಇಂಜಿನಿಯರಿಂಗ್ ಕೋರ್ಸ್ ಓದಿ ನಿಮ್ಮ ಕರಿಯರ್ ರೂಪಿಸಿಕೊಳ್ಳಬಹುದಾಗಿದೆ. ಈ ಡಿಪ್ಲೊಮ ಕೋರ್ಸ್ನಲ್ಲಿ, ಡಿಪ್ಲೊಮ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್, ಡಿಪ್ಲೊಮ ಇನ್ ಇಲೆಕ್ಟ್ರಿಕಲ್ ಇಂಜಿನಿಯರಿಂಗ್, ಡಿಪ್ಲೊಮ ಇನ್ ಸಿವಿಲ್ ಇಂಜಿನಿಯರಿಂಗ್, ಡಿಪ್ಲೊಮ ಇನ್ ಕೆಮಿಕಲ್ ಇಂಜಿನಿಯರಿಂಗ್ ಕೋರ್ಸ್ ಅಧ್ಯಯನ ಮಾಡಬಹುದು.
ಅಲ್ಲದೇ ಇನ್ನೂ ಅನೇಕ ವಿಷಯಗಳಲ್ಲಿ ಡಿಪ್ಲೊಮ ಕೋರ್ಸ್ಗಳಿವೆ. ಈ ಎಲ್ಲಾ ಕೋರ್ಸ್ಗಳು ಮೂರು ವರ್ಷದ ಕೋರ್ಸ್ಗಳಾಗಿವೆ. ಅಭ್ಯರ್ಥಿಗಳು ಪ್ರವೇಶ ಪರೀಕ್ಷೆಯ ಮೂಲಕ ಅಥವಾ ನೇರ ಪ್ರವೇಶದ ಮೂಲಕ ಡಿಪ್ಲೊಮ ಇಂಜಿನಿಯರಿಂಗ್ಗೆ ಪ್ರವೇಶ ಪಡೆಯಬಹುದು. ಪ್ರವೇಶ ಪರೀಕ್ಷೆಗಳು ಕಾಲೇಜಗಳನ್ನು ಅವಲಂಭಿಸಿರುತ್ತದೆ. ಡಿಪ್ಲೊಮ ಇಂಜಿನಿಯರಿಂಗ್ ಕೋರ್ಸ್ ನಂತರ ಖಾಸಗಿ ವಲಯದಲ್ಲಿ ಮತ್ತು ಸರ್ಕಾರಿ ವಲಯದಲ್ಲಿ ಉದ್ಯೋಗಗಳು ಸಿಗುತ್ತವೆ. ಅಲ್ಲದೆ ಸ್ವಯಂ ಉದ್ಯೋಗವನ್ನು ಸಹ ಆರಂಭಿಸಬಹುದಾಗಿದೆ.
ಡಿಪ್ಲೊಮ ಇನ್ ಫೈನ್ ಆರ್ಟ್ಸ್
ಡಿಪ್ಲೊಮ ಇನ್ ಫೈನ್ ಆರ್ಟ್ಸ್ ಎಂಬುದು ಆರ್ಟ್ಸ್ ಮತ್ತು ಅದರ ಸಂಬಂಧಿತ ಕ್ಷೇತ್ರಗಳ ಪ್ರಮಾಣಪತ್ರ ಮಟ್ಟದ ಕೋರ್ಸ್ ಆಗಿದೆ. ಕೆಲವು ಕಾಲೇಜುಗಳು ಎಸ್ಎಸ್ಎಲ್ಸಿಯಲ್ಲಿ ತೆಗೆದುಕೊಂಡ ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತದೆ. ಸೃಜನಶೀಲ ಮತ್ತು ವಿನ್ಯಾಸದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಈ ಕೋರ್ಸ್ಮಾಡಬಹುದಾಗಿದೆ. ಈ ಕೋರ್ಸ್ನ ಅವಧಿ 1 ವರ್ಷ. ಈ ಕೋರ್ಸ್ನ ನಂತರ ಗ್ರಾಫಿಕ್ ಡಿಸೈನರ್, ಆರ್ಟ್ ಟೀಚರ್, ಫ್ಲ್ಯಾಶ್ ಆನಿಮೇಟರ್, ಆರ್ಟ್ ಲೈಸನ್ ಆಫೀಸರ್ ನಂತಹ ವೃತ್ತಿ ಆಯ್ಕೆಗಳಿವೆ.
ಸ್ಟೆನೋಗ್ರಫಿಯಲ್ಲಿ ಡಿಪ್ಲೊಮಾ
ಸಾಮಾನ್ಯವಾಗಿ ಶೀಘ್ರಲಿಪಿಗಾರರಿಗೆ ನ್ಯಾಯಾಲಯಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚು. ನ್ಯಾಯಾಲಯಗಳು, ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳಲ್ಲಿ, ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ, ಖಾಸಗಿ ಕ್ಷೇತ್ರಗಳಲ್ಲು ಶೀಘ್ರಲಿಪಿಗಾರರಿಗೆ ಉದ್ಯೋಗವಕಾಶಗಳಿವೆ. ಈ ಕೋರ್ಸ್ನ ಅವಧಿಯು 1 ರಿಂದ 2 ವರ್ಷಗಳವರೆಗೆ ಇರುತ್ತದೆ. ಏಕೆಂದರೆ ಇದು ಸಂಸ್ಥೆಯಿಂದ ಸಂಸ್ಥೆಗೆ ಬದಲಾಗುತ್ತದೆ.