ತೆಂಗಿನಕಾಯಿ ದಕ್ಷಿಣ ಭಾರತದ ಬಹುತೇಕ ಆಹಾರದಲ್ಲಿ ನಿತ್ಯ ಬಳಕೆಯಾಗುತ್ತದೆ. ತೆಂಗು ಮತ್ತೆ ಇಂಗು ಇದ್ದರೆ ಮಂಗ ಸಹ ಚೆನ್ನಾಗಿ ಅಡುಗೆ ಮಾಡಬಲ್ಲದು ಎಂಬ ಗಾದೆ ಮಾತೇ ಇದೆ. ತೆಂಗಿನ ಕಾಯಿ ತುರಿಯನ್ನು ಅಡುಗೆಯಲ್ಲಿ ಬಳಸುವುದು ಸಾಮಾನ್ಯ. ತೆಂಗಿನ ಕಾಯಿಯ ಹಸಿ ಚೂರನ್ನು ತಿನ್ನುವುದು ಕೆಲವರಿಗೆ ಇಷ್ಟವಾಗುವುದಿಲ್ಲ.
ಆದರೆ, ಆರೋಗ್ಯಕ್ಕೆ ಇಷ್ಟೆಲ್ಲಾ ಪ್ರಯೋಜಗಳಿದ್ದಾಗ ಮನೆಯಲ್ಲಿಯೇ ಸಿಗುವ ಆಹಾರ ಪದಾರ್ಥಗಳಿಂದ ಪ್ರಯೋಜನ ಪಡೆದುಕೊಳ್ಳಬೇಕು. ಇನ್ನೂಹಬ್ಬ, ಅಥವಾ ನೆಂಟರು ಬಂದ ಸಂದರ್ಭದಲ್ಲಿ ಅನಿವಾರ್ಯವಾಗಿ ಹೆಚ್ಚು ಕಾಯಿಗಳನ್ನು ಒಡೆಯಬೇಕಾಗುತ್ತದೆ. ಆಗ ಅಡುಗೆ ಮುಗಿದ ಮೇಲೂ ಕೆಲವು ಕಾಯಿಗಳು ಬಳಕೆಯಾಗದೆ ಹಾಗೆಯೇ ಉಳಿದಿರುತ್ತದೆ. ಅದನ್ನು ಕೆಡದಂತೆ ಕಾಪಾಡುವುದು ಕೂಡ ಸವಾಲಿನ ಕೆಲಸವೇ.
ಬಿಸಿಲಿದ್ದರೆ ಒಣಗಿಸಿ: ಬಿಸಿಲಿದ್ದರೆ ಕಾಯಿಯನ್ನು ಒಣಗಿಸಿ ಮರುದಿನ ಅಡುಗೆಗೆ ಬಳಸಬಹುದು.
ಕಾಯಿ ತುರಿಯನ್ನು ಬೆಚ್ಚಗೆ ಮಾಡಿ ಇರಿಸಬಹುದು: ಕಾಯಿ ತುರಿಯನ್ನು ಫ್ರಿಜ್ನಲ್ಲಿ ಇಡಬಹುದು, ಇಲ್ಲವಾದಲ್ಲಿ ಕಾಯಿ ತುರಿಯನ್ನು ಪಾತ್ರೆಗಾಗಿ ಒಲೆಯ ಮೇಲಿಟ್ಟು ಸ್ವಲ್ಪ ಬೆಚ್ಚಗೆ ಮಾಡಿಟ್ಟರೆ ನಂತರ ಅಡುಗೆಗೆ ಬಳಸಬಹುದು.
ಉಪ್ಪಿನ ಪಾತ್ರೆಯಲ್ಲಿ ಹಾಕಿಡಬಹುದು: ಒಡೆದ ಕಾಯಿಯನ್ನು ಉಪ್ಪಿನ ಪಾತ್ರೆಯಲ್ಲಿ ಇಟ್ಟರೆ ಒಂದೆರಡು ದಿನಗಳು ಕೆಡುವುದಿಲ್ಲ.
ಅರಿಶಿನ ಹಚ್ಚಿಡಿ: ಒಡೆದ ಕಾಯಿಗೆ ಸ್ವಲ್ಪ ಅರಿಶಿನವನ್ನು ಹಚ್ಚಿಡುವುದರಿಂದ ಹಾಳಾಗದಂತೆ ತಡೆಯಬಹುದಾಗಿದೆ.
ಭತ್ತದ ಹುಲ್ಲಿನೊಳಗೆ ಇಡಬಹುದು: ಭತ್ತದ ಹುಲ್ಲಿನೊಳಗೆ ಕಾಯಿಯನ್ನು ಇಡುವುದರಿಂದ ಹುಲ್ಲಿನಲ್ಲಿರುವ ಉಷ್ಣಾಂಶವು ಕಾಯಿ ಹಾಳಾಗದಂತೆ ನೋಡಿಕೊಳ್ಳುತ್ತದೆ.
ಅಂಗಡಿಯಲ್ಲಿ ತೆಂಗಿನ ಕಾಯಿ ರಕ್ಷಣೆ ಹೇಗೆ ? ಅಂಗಡಿಗಳಲ್ಲಿ ತೆಂಗಿನಕಾಯಿಯನ್ನು ತುಂಬಾ ಜಾಗ್ರತೆಯಲ್ಲಿ ಇಡುತ್ತಾರೆ. ಇಲ್ಲಿ ತೆಂಗಿನ ಕಾಯಿಗಳನ್ನು ನೈಸರ್ಗಿಕ ಗುಣಮಟ್ಟಕ್ಕೆ ಅನುಗುಣಕ್ಕಾಗಿ ಸರಿಯಾಗಿ ಶೇಖರಣೆ ಮಾಡುತ್ತಾರೆ. ಅಂದರೆ ತೆಂಗಿನ ಕಾಯಿಯನ್ನು ಹೆಚ್ಚು ಬಿಸಿಯು ಅಲ್ಲದ ತಂಪು ಅಲ್ಲದ ಪ್ರದೇಶದಲ್ಲಿ ಇಡುತ್ತಾರೆ.
ಕಾಯಿಯ ಕಣ್ಣಿನ ಬಳಿ ಸುಣ್ಣವನ್ನು ಹಚ್ಚಿಡುತ್ತಾರೆ ಕಾಯಿಯ ಕಣ್ಣಿನ ಸಮೀಪ ಸುಣ್ಣವನ್ನು ಹಚ್ಚಿಡುತ್ತಾರೆ, ಇದರಿಂದ ಹಲವು ಸಮಯದವರೆಗೆ ಕಾಯಿ ಹಾಳಾಗುವುದಿಲ್ಲ.