ಅಕ್ಟೋಬರ್ 2… ಭಾರತದ ಪಾಲಿನ ಮಹತ್ವದ ದಿನ. ನಮ್ಮ ದೇಶದ ಹೆಮ್ಮೆ, ತನ್ನ ತತ್ವ, ಆದರ್ಶಗಳಿಂದ ಜಗತ್ತನ್ನು ಬೆಳಗಿನ ಮಹಾತ್ಮ ಗಾಂಧೀಜಿ ಅವರ ಜನ್ಮದಿನವಿದು. ಈ ವರ್ಷ ನಾವು ಬಾಪು ಅವರ ಜಯಂತಿಯನ್ನು ಆಚರಿಸುತ್ತೇವೆ. ಗಾಂಧೀಜಿ ಅವರ ಚಿಂತನೆ, ಆದರ್ಶ, ಜೀವನ ಮೌಲ್ಯಗಳನ್ನು ಸ್ಮರಿಸುವ ಮತ್ತು ಅದರಂತೆ ನಡೆಯುವ ಪಣ ತೊಡುವ ದಿನವಿದು.
ಗಾಂಧೀಜಿ ಬ್ರಿಟಿಷರ ಆಳ್ವಿಕೆಯಿಂದ ಭಾರತವನ್ನು ಸ್ವಾತಂತ್ರ್ಯದ ಕಡೆಗೆ ಮುನ್ನಡೆಸಿದ ಸ್ವಾತಂತ್ರ್ಯ ಹೋರಾಟಗಾರ ಮಾತ್ರವಲ್ಲ, ಅವರು ಎಲ್ಲರ ಬದುಕಿನ ಬೆಳಕು, ಆದರ್ಶವೂ ಹೌದು. ಸತ್ಯದ ಹಾದಿಯಲ್ಲಿ ಸಾಗಿ ಬೆಳಕು ನೀಡಿದ ದೂರದೃಷ್ಟಿಯ ನಾಯಕ ಮಹಾತ್ಮ ಗಾಂಧೀಜಿ. ಮಹಾತ್ಮ ಗಾಂಧೀಜಿ ಅವರ ಚಿಂತನೆಗಳು ಎಂದೆಂದಿಗೂ ಪ್ರಸ್ತುತ. ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾತ್ಮರಿವರು. ರಾಷ್ಟ್ರಪಿತ ಎಂದು ಎಲ್ಲರಿಂದಲೂ ಪ್ರೀತಿಯಿಂದ ಕರೆಸಿಕೊಳ್ಳುವ ಈ ಮಹಾನ್ ನಾಯಕರಿಗೆ ಭಾರತ ಸದಾ ಋಣಿ.
ಮಹಾತ್ಮಾ ಗಾಂಧಿಜಿ ಅವರ ಬಗ್ಗೆ ನೀವು ಅರಿಯಲಾರದ ಕೆಲವು ಸಂಗತಿಗಳು ಇಲ್ಲಿವೆ.
- ಮಹಾತ್ಮಾ ಗಾಂಧೀಜಿಯವರು ಐರಿಶ್ ಟೋನ್ನಲ್ಲಿ ಇಂಗ್ಲಿಷ್ ಮಾತನಾಡುತ್ತಿದ್ದರು. ಏಕೆಂದರೆ ಅವರ ಶಿಕ್ಷಕರಲ್ಲಿ ಒಬ್ಬರು ಐರಿಶ್ನವರಾಗಿದ್ದರು.
- ಮಹಾತ್ಮಾ ಗಾಂಧೀಜಿಯವರು ನೊಬೆಲ್ ಶಾಂತಿ ಪ್ರಶಸ್ತಿಗೆ ಐದು ಬಾರಿ ನಾಮನಿರ್ದೇಶನಗೊಂಡರು ಆದರೆ ಅವರು ಎಂದಿಗೂ ಪ್ರಶಸ್ತಿಯನ್ನು ಪಡೆದಿಲ್ಲ.
- ಮಹಾನ್ ಬಂಗಾಳಿ ಕವಿ ರವೀಂದ್ರನಾಥ ಟ್ಯಾಗೋರ್ ಅವರು ಗಾಂಧೀಜಿಯವರಿಗೆ ‘ಮಹಾತ್ಮ’ ಎಂಬ ಬಿರುದನ್ನು ನೀಡಿದರು.
- ಮಹಾತ್ಮ ಗಾಂಧೀಜಿಯವರ ಜನ್ಮದಿನದಂದೇ, ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನವಿದೆ.
- ಮಹಾತ್ಮಾ ಗಾಂಧೀಜಿಯವರ ಅಂತ್ಯಕ್ರಿಯೆಯ ಮೆರವಣಿಗೆ 8 ಕಿ.ಮೀ ನಡೆಯಿತು
- ವಿದೇಶದಲ್ಲಿ 48 ರಸ್ತೆಗಳಿಗೆ ಮತ್ತು ದೇಶದ 53 ರಸ್ತೆಗಳಿಗೆ ಮಹಾತ್ಮ ಗಾಂಧೀಜಿಯವರ ಹೆಸರನ್ನು ಇಡಲಾಗಿದೆ.
- ಫೋರ್ಡ್ ಮೋಟಾರ್ ಕಂಪನಿಯ ಸಂಸ್ಥಾಪಕ ಹೆನ್ರಿ ಫೋರ್ಡ್ ಮಹಾತ್ಮಾ ಗಾಂಧೀಜಿಯವರ ಅತಿದೊಡ್ಡ ಅಭಿಮಾನಿ